ಬಿಜೆಪಿ ನಾಯಕನ ಕಾಲು ಮುಟ್ಟಿ ನಮಸ್ಕರಿಸಿದ ಪೊಲೀಸ್ : ವಿಡಿಯೋ ವೈರಲ್ - Policeman touches BJP leaders feet in uniform
🎬 Watch Now: Feature Video
ಉಜ್ಜೈನಿ : ಇಲ್ಲಿನ ಮಾದವ ನಗರ ಪೊಲೀಸ್ ಸ್ಟೇಷನ್ ಇನ್-ಚಾರ್ಜ್ ದಿನೇಶ್ ಪ್ರಜಾಪತಿ ಅವರು ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ ಶರ್ಮಾ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿಯಾಗಿ ಸಮವಸ್ತ್ರ ಧರಿಸಿಯೇ ರಾಜಕೀಯ ವ್ಯಕ್ತಿಯ ಕಾಲು ಮುಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ವಿ ಡಿ ಶರ್ಮಾ ಉಜ್ಜೈನಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಕಾಂಗ್ರೆಸ್ನಿಂದ ತೀವ್ರ ಟೀಕೆ ವ್ಯಕ್ತವಾಗಿದೆ.