ಮೊಬೈಲ್ ಕದ್ದು ಪರಾರಿಯಾಗ್ತಿದ್ದವರಿಗೆ ಸ್ಥಳೀಯರಿಂದ ಸಖತ್ ಗೂಸಾ... ವಿಡಿಯೋ! - ಸಿಸಿಟಿವಿಯಲ್ಲಿ ವಿಡಿಯೋ
🎬 Watch Now: Feature Video
ನವದೆಹಲಿ: ಸಿಲಿಂಡರ್ ಸಾಗಾಣಿಕೆ ಮಾಡ್ತಿದ್ದ ವ್ಯಕ್ತಿಯೋರ್ವನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗ್ತಿದ್ದ ದುಷ್ಕರ್ಮಿಗಳಿಗೆ ಸ್ಥಳೀಯರು ಸಖತ್ ಆಗಿ ಪಾಠ ಕಲಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಉಸ್ಮಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ ಮೇಲೆ ಬಂದಿರುವ ಇಬ್ಬರು ರೋಡ್ನಲ್ಲಿ ಸಿಲಿಂಡರ್ ಗಾಡಿ ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ರೋಡ್ನಲ್ಲಿದ್ದ ವ್ಯಕ್ತಿಯೋರ್ವ ಅವರನ್ನ ತಡೆ ಹಿಡಿದಿದ್ದು, ಧರ್ಮದೇಟು ನೀಡಿ ಪೊಲೀಸರಗೆ ಹಸ್ತಾಂತರ ಮಾಡಿದ್ದಾರೆ.