ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ.. ಪಾಕ್ಗೆ ವಾರ್ನ್ ಮಾಡಿದ ಅಮೆರಿಕ! - ಜೈಶ್-ಎ-ಮೊಹಮ್ಮದ್
🎬 Watch Now: Feature Video
ನ್ಯೂಯಾರ್ಕ್: ಹಿಂಸಾಚಾರ ಪ್ರಚೋದಿಸಲು ಪ್ರಯತ್ನಿಸುವ ಲಷ್ಕರ್ - ಎ- ತೋಯ್ಬಾ, ಜೈಷ್-ಎ-ಮೊಹಮ್ಮದ್ ಸೇರಿದಂತೆ ಉಗ್ರ ಸಂಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕ್ಗೆ ಮತ್ತೊಮ್ಮೆ ಅಮೆರಿಕ ಎಚ್ಚರಿಕೆ ನೀಡಿದೆ. ಅಮೆರಿಕದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾ ಭಾಗದ ಪ್ರಧಾನ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ.ವೆಲ್ಸ್ ಇದೇ ವಿಷಯವಾಗಿ ಮಾತನಾಡಿದ್ದು, ಗಡಿ ನಿಯಂತ್ರಣ ರೇಖೆಯಾದ್ಯಂತ ಉಗ್ರ ಚಟುವಟಿಕೆ ನಡೆಯುತ್ತಿದ್ದು, ತಕ್ಷಣ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಈಗಾಗಲೇ 2020ರ ಫೆಬ್ರವರಿಯೊಳಗೆ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನೀವೂ ತೊಂದರೆ ಅನುಭವಿಸಬೇಕಾಗುತ್ತದೆಂದು ಪಾಕಿಸ್ತಾನಕ್ಕೆ ಎಫ್ಎಟಿಎಫ್ ನೇರ ಎಚ್ಚರಿಕೆ ರವಾನಿಸಿದೆ.