ಹಗ್ಗದಿಂದ ಮಾಡಿದ ಸ್ಟ್ರೆಚರ್ನಲ್ಲಿ ಗರ್ಭಿಣಿಯನ್ನು 4 ಕಿ.ಮೀ. ಹೊತ್ತೊಯ್ದ ಯುವಕರು! - ಗರ್ಭಿಣಿ
🎬 Watch Now: Feature Video
ನುವಾಪಾಡಾ(ಒಡಿಶಾ): ತಾವೇ ಹಗ್ಗಗಳಿಂದ ನಿರ್ಮಿಸಿದ ಸ್ಟ್ರೆಚರ್ ಮೂಲಕ ಗರ್ಭಿಣಿಯೊಬ್ಬರನ್ನು ಯುವಕರ ತಂಡವೊಂದು ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಒಡಿಶಾ ಜಿಲ್ಲೆಯ ನುವಾಪಾಡಾ ಜಿಲ್ಲೆಯ ಖಾಡಿಯಾಲಾ ಗ್ರಾಮದ ಸಮಾದ್ಪಾದರ್ನಲ್ಲಿ ನಡೆದಿದ್ದು, ಈ ಗ್ರಾಮಕ್ಕೆ ರಸ್ತೆ ಸರಿಯಿಲ್ಲದ ಕಾರಣ ಆ್ಯಂಬುಲೆನ್ಸ್ ತಲುಪುತ್ತಿರಲಿಲ್ಲ. ಹಾಗಾಗಿ ಯುವಕರು ಸುಮಾರು 4 ಕಿಲೋಮೀಟರ್ ದೂರದವರೆಗೆ ಗರ್ಭಿಣಿಯನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.