ವಲಸೆ ಕಾರ್ಮಿಕರಿಗೆ ಮಿಡಿದ ಮನ... 48 ಸಾವಿರ ರೂ. ನೀಡಿದ 12ರ ಬಾಲೆ! - ಬಾಲಕಿ ನಿಹಾರಿಕಾ ದ್ವಿವೇದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7424998-thumbnail-3x2-wddfd.jpg)
ನೋಯ್ಡಾ: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನೇಕ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ತವರು ರಾಜ್ಯ ಸೇರಲು ಹರಸಾಹಸ ಪಡುವಂತಾಗಿದೆ. ಇದರ ನಡುವೆ 12 ವರ್ಷದ ಬಾಲಕಿ ನಿಹಾರಿಕಾ ದ್ವಿವೇದಿ, ತನ್ನ ಬಳಿ ಇದ್ದ 48 ಸಾವಿರ ರೂ ನೀಡಿ ಮೂವರು ವಲಸೆ ಕಾರ್ಮಿಕರು ಮನೆಗೆ ತೆರಳಲು ಸಹಾಯ ಮಾಡಿದ್ದಾಳೆ. ವಿಮಾನದ ಮೂಲಕ ಈ ಮೂವರು ವಲಸೆ ಕಾರ್ಮಿಕರು ತಮ್ಮ ಊರು ಸೇರಿಕೊಳ್ಳಲು ನಿಹಾರಿಕಾ ಸಹಾಯ ಮಾಡಿದ್ದಾಳೆ. ಸಮಾಜ ನಮಗೆ ಎಲ್ಲ ರೀತಿಯ ಸೌಲಭ್ಯ ನೀಡಿದ್ದು, ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.