ಮಮತಾ ಬ್ಯಾನರ್ಜಿ ಮೇಲೆ ಯಾರೂ ಹಲ್ಲೆ ನಡೆಸಿಲ್ಲ, ತಳ್ಳಿಲ್ಲ: ಪ್ರತ್ಯಕ್ಷದರ್ಶಿಗಳ ಮಾಹಿತಿ - ಹಲ್ಲೆಗೊಳಗಾದ ಮಮತಾ
🎬 Watch Now: Feature Video
ನಂದಿಗ್ರಾಮ(ಪಶ್ಚಿಮ ಬಂಗಾಳ): ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ತಮ್ಮ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಸದ್ಯ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಸಿಎಂ ಬ್ಯಾನರ್ಜಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳುತ್ತಾರೆ. ಆದರೆ ಅವರ ಮೇಲೆ ಯಾರೂ ಸಹ ಹಲ್ಲೆ ಮಾಡಿಲ್ಲ. ಅವರನ್ನು ನೋಡಲು ಬಹಳಷ್ಟು ಜನರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಈ ವೇಳೆ ಅವರು ದಿಢೀರ್ ಆಗಿ ಕೆಳಗೆ ಬಿದ್ದಿರುವ ಕಾರಣ ಕುತ್ತಿಗೆ ಮತ್ತು ಕಾಲಿಗೆ ಗಾಯವಾಗಿದೆ ಎಂದರು.