20 ಸಾವಿರಕ್ಕೂ ಹೆಚ್ಚು ಪಕ್ಷಿಗಳ ಸಾವು.. ಆದರೂ ಕ್ರಮವಿಲ್ಲವೇಕೆ!? - ಸಂಭಾರ್ ಸರೋವರದಲ್ಲಿ 20 ಸಾವಿರ ಪಕ್ಷಿಗಳ ಸಾವು
🎬 Watch Now: Feature Video
ಕೆಲ ದಿನಗಳಿಂದ ರಾಜಸ್ಥಾನದ ಜೈಪುರದ ಸಂಭಾರ್ ಸರೋವರದ ಸುತ್ತಮುತ್ತ ವಿವಿಧ ಪ್ರಭೇದದ ಸಾವಿರಾರು ಪಕ್ಷಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ವಲಸೆ ಜಾತಿಯ ಪಕ್ಷಿಗಳು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಈಗಾಗಲೇ ಮೃತಪಟ್ಟಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪಕ್ಷಿಗಳ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೂ ಸಹ ಅಧಿಕಾರಿಗಳು ಇನ್ನೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ. ಕೆಲ ಎನ್ಜಿಒಗಳು ಗಾಯಗೊಂಡಿರುವ ಪಕ್ಷಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.