ವಿಡಿಯೋ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಮಹಿಳೆಯ ರಕ್ಷಣೆ - ಆರ್‌ಪಿಎಫ್ ಮಹಿಳಾ ಸಿಬ್ಬಂದಿ
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಮಹಿಳೆಯನ್ನು ಆರ್‌ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಿಸಿದರು. ಈ ಘಟನೆ ಮುಂಬೈನ ಸ್ಯಾಂಡ್‌ಹರ್ಸ್ಟ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮಹಿಳಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ 50 ವರ್ಷದ ಮಹಿಳೆ ಪ್ರಾಣಾಪಾಯದಿಂದ ಪಾರಾದರು. ಚಲಿಸುತ್ತಿರುವಾಗಲೇ ರೈಲು ಹತ್ತಲು ಮಹಿಳೆ ಯತ್ನಿಸಿದ್ದರು. ಅದೇ ಸಮಯಕ್ಕೆ ರೈಲು ವೇಗವಾಗಿ ಚಲಿಸಲು ಆರಂಭಿಸಿದೆ. ಪರಿಣಾಮ, ರೈಲಿನೊಳಗೆ ಕಾಲಿಡಲು ಸಾಧ್ಯವಾಗದೆ ಆಕೆ ನಿಯಂತ್ರಣ ಕಳೆದುಕೊಂಡಿದ್ದರು.