ಟ್ರೈನ್​​ನಲ್ಲಿ ಸ್ಟಂಟ್​ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ... ಭೀಕರ ವಿಡಿಯೋ! - ಸ್ಟಂಟ್​ ಮಾಡುವಾಗ ಸಾವು

🎬 Watch Now: Feature Video

thumbnail

By

Published : Dec 30, 2019, 4:17 PM IST

ಮುಂಬೈ: ಸ್ಥಳೀಯ ಟ್ರೈನ್​ನಲ್ಲಿ ಚಲಿಸುತ್ತಿದ್ದ ವೇಳೆ ಸ್ಟಂಟ್​ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ ರೈಲ್ವೆ ಸ್ಟೇಷನ್​ ಬಳಿ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಟ್ರೈನ್​​ನಲ್ಲಿ ಬಾಗಿಲ ಬಳಿ ನಿಂತುಕೊಂಡಿದ್ದ ಯುವಕ ವಿಚಿತ್ರವಾದ ಸ್ಟಂಟ್​ ಮಾಡುತ್ತಿದ್ದಾಗ ಎದುರುಗಡೆಯ ಕಂಬವೊಂದು ಆತನಿಗೆ ಹೊಡೆದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೈಲ್ವೆ ಅಧಿಕಾರಿಗಳು ಇದರ ಬಗ್ಗೆ ಈಗಾಗಲೇ ವಾರ್ನ್​ ನೀಡಿದ್ರು, ನಿತ್ಯ ಹತ್ತಾರು ಯುವಕರು ಈ ರೀತಿಯ ಅಪಾಯಕಾರಿ ಸ್ಟಂಟ್​ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಜೂನ್​ ತಿಂಗಳಲ್ಲೂ ಈ ರೀತಿಯ ಸ್ಟಂಟ್​ ಮಾಡುತ್ತಿದ್ದ ಇಬ್ಬರು ಯುವಕರನ್ನ ರೈಲ್ವೆ ಪೊಲೀಸ್​ ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.