ಕೋವಿಡ್ ವ್ಯಾಕ್ಸಿನ್ ನೀಡಿದ ಖುಷಿ: ಡ್ಯಾನ್ಸ್ ಮಾಡಿ ಸಂಭ್ರಮಿಸಿದ ವೈದ್ಯರು! - ಮಧ್ಯಪ್ರದೇಶದ ಗ್ವಾಲಿಯರ್
🎬 Watch Now: Feature Video

ಗ್ವಾಲಿಯರ್(ಮಧ್ಯಪ್ರದೇಶ): ಕೊರೊನಾ ಮಹಾಮಾರಿಗೆ ಕೊನೆಗೂ ವ್ಯಾಕ್ಸಿನ್ ಲಭ್ಯವಾಗಿದ್ದು, ಇದಿನಿಂದ ದೇಶಾದ್ಯಂತ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲೂ ಆರೋಗ್ಯ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಇದೇ ಸಂಭ್ರಮದಲ್ಲಿ ವೈದ್ಯರು ಡ್ಯಾನ್ಸ್ ಮಾಡಿದ್ದಾರೆ. ಗ್ವಾಲಿಯರ್ ಸೆಂಟರ್ನಲ್ಲಿ ಚುಚ್ಚುಮದ್ದು ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ವೈದ್ಯರು ಹಾಗೂ ಆರೋಗ್ಯಾಧಿಕಾರಿಗಳು ಸಂತೋಷದಿಂದ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ.