ಜನಪರ ಬಜೆಟ್ ಮಂಡನೆಯಾಗಲಿದೆ: ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ - 2021-22ರ ಬಜೆಟ್
🎬 Watch Now: Feature Video
ದೆಹಲಿ: ಇಂದು ಕೇಂದ್ರ ಸರ್ಕಾರದ 2021-22ರ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಆಶಯವಾದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವ ನುಡಿಯಂತೆ ಆಯವ್ಯಯ ಇರಲಿದೆ. ಆತ್ಮನಿರ್ಭರ ಯೋಜನೆ ಹೇಗೆ ಜನರಿಗೆ ಉಪಯೋಗವಾಯಿತೋ ಹಾಗೆಯೇ ಇಂದಿನ ಬಜೆಟ್ ಜನಪರವಾಗಿರಲಿದೆ ಎಂದು ಹೇಳಿದರು.