Watch: ದುರ್ಗಾ ಮೂರ್ತಿ ನಿಮಜ್ಜನಕ್ಕೆ ಹೊರಟವರ ಮೇಲೆ ಹರಿದ ಕಾರು - ದಸರಾ ಮೆರವಣಿಗೆ
🎬 Watch Now: Feature Video
ಭೋಪಾಲ್ (ಮಧ್ಯಪ್ರದೇಶ): ಮೊನ್ನೆಯಷ್ಟೇ ದಸರಾ ಮೆರವಣಿಗೆ ವೇಳೆ ವೇಗವಾಗಿ ಬಂದ ಕಾರೊಂದು ಹತ್ತಾರು ಜನರ ಮೇಲೆ ಹರಿದು ಹೋದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಇಂತಹದ್ದೇ ಘಟನೆ ಇಂದು ನಡೆದಿದೆ. ಭೋಪಾಲ್ನಲ್ಲಿ ದುರ್ಗಾ ಮೂರ್ತಿ ನಿಮಜ್ಜನಕ್ಕೆಂದು ಮೆರವಣಿಗೆ ಸಾಗುತ್ತಿರುವ ವೇಳೆ ವೇಗವಾಗಿ ಬಂದ ಕಾರು ಜನರ ಕಡೆಗೆ ನುಗ್ಗಿ ಬಂದಿದೆ. ನಾಲ್ವರಿಗೆ ಕಾರು ಗುದ್ದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಕಾರು ಚಾಲಕನಿಗಾಗಿ ಬಲೆ ಬೀಸಿದ್ದಾರೆ.