ಜಲ ಪ್ರಳಯಕ್ಕೆ ನಲುಗಿದ ಮಹಾರಾಷ್ಟ್ರ, ಉತ್ತರ ಕರ್ನಾಟಕ... ನೀರಿನ ಪ್ರವಾಹ ನೋಡಿ ಹೌಹಾರಿದ ಜನರು! - Maharashtra
🎬 Watch Now: Feature Video
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಪ್ರವಾಹ ಉದ್ಭವವಾಗಿದ್ದು, ಜಲ ಪ್ರಳಯಕ್ಕೆ ಮಹಾರಾಷ್ಟ್ರ, ಉತ್ತರ ಕರ್ನಾಟಕ ಸಂಪೂರ್ಣವಾಗಿ ನಲುಗಿ ಹೋಗಿವೆ. ಮಹಾರಾಷ್ಟ್ರದ ಕೊಲ್ಲಾಪುರ, ಸತರಾ ಹಾಗೂ ಸಾಂಗ್ಲಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ರಕ್ಷಣಾ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆ ಕೆಲವೊಂದು ಪ್ರದೇಶಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿರುವುದರಿಂದ ನದಿಗಳಂತೆ ಕಂಡು ಬರುತ್ತಿವೆ. ಇದರ ಮಧ್ಯೆ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.