ತಂದೆಯನ್ನ ಹೆಗಲ ಮೇಲೆ ಹೊತ್ತು ನಡೆದ ಕಲಿಯುಗದ ಶ್ರವಣಕುಮಾರ - ಕಲಿಯುಗ ಶ್ರವಣಕುಮಾರ ವೈರಲ್ ವಿಡಿಯೋ
🎬 Watch Now: Feature Video
ಕೊರೊನಾ ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರ ಬದುಕು ದುರ್ಭರವಾಗಿದೆ. ತಮ್ಮ ಸ್ವಂತ ಊರುಗಳಿಗೆ ತೆರಳಲು ಜನ ಹಾತೊರೆಯುತ್ತಿದ್ದಾರೆ. ಜೀವನೋಪಾಯದ ಕೊರತೆ, ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಗುಜರಾತ್ನಲ್ಲಿದ್ದ ಮಧ್ಯಪ್ರದೇಶದ ತಂದೆ ಮಗ ವಾಪಸ್ ರಾಜ್ಯಕ್ಕೆ ಮರಳಲು ನಿರ್ಧರಿಸಿದ್ರು. ಆದರೆ, ತಂದೆ ದಿವ್ಯಾಂಗರಾದ ಕಾರಣ ಮಗ ತನ್ನ ತಂದೆಯನ್ನು ಹೆಗಲಮೇಲೆ ಹೊತ್ತುಕೊಂಡೇ ಗುಜರಾತ್ ಗಡಿ ದಾಟಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ,ಜನ ಇವನನ್ನು ಕಲಿಯುಗದ ಶ್ರವಣಕುಮಾರ ಎಂದು ಕರೆಯುತ್ತಿದ್ದಾರೆ.