ನಡುರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಚಿರತೆ: ಪೇಚಿಗೆ ಬಿದ್ದ ವಾಹನ ಸವಾರರು - hobilam, kurnool district of andhrapradesh
🎬 Watch Now: Feature Video
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಹೋಬಿಲಂನಲ್ಲಿ ಚಿರತೆಯೊಂದು ರಸ್ತೆಯಲ್ಲಿ ಕುಳಿತಿರುವ ದೃಶ್ಯ ಕಂಡುಬಂದಿದೆ. ಸೋಮವಾರ ರಾತ್ರಿ ಚಿರತೆ ದುರ್ಗಮ್ಮ ದೇವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಇದರಿಂದಾಗಿ ವಾಹನ ಸವಾರರು ಭಯಭೀತರಾಗಿ ತಮ್ಮ ವಾಹನಗಳನ್ನು ರಸ್ತೆಯ ಇಕ್ಕೆಲೆಗಳಲ್ಲಿಯೇ ನಿಲ್ಲಿಸಿದ್ದರು. ಕೆಲ ಸಮಯದ ಬಳಿಕ ನಲ್ಲಮಲ್ಲ ಅರಣ್ಯ ಪ್ರದೇಶದೊಳಗೆ ಚಿರತೆ ಹೆಜ್ಜೆಹಾಕಿತು. ಈ ಭಾಗದಲ್ಲಿ ಕಾಡಿನಿಂದ ಹೊರ ಬರುತ್ತಿರುವ ಪ್ರಾಣಿಗಳು ಅಹೋಬಿಲಂ ದೇವಾಲಯದ ಬಳಿ ಸಂಚರಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
TAGGED:
ವಾಹನ ಸವಾರರ ಪರದಾಟ