ರೌಡಿಯಂತೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕ! ವಿಡಿಯೋ... - ತೆಲಂಗಾಣ ಸುದ್ದಿ
🎬 Watch Now: Feature Video
ಪಾಠ ಹೇಳಬೇಕಾಗಿದ್ದ ಗುರವೇ ರೌಡಿಯಂತೆ ವರ್ತಿಸಿದ್ದಾನೆ. ಕ್ಲಾಸ್ ರೂಂನಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಮನೋಜ್ ಎಂಬಾತನ ಮೇಲೆ ಶಿಕ್ಷಕ ಸಿದ್ದಿರಾಜ್ ರೌಡಿ ಥರಾ ಹಲ್ಲೆ ಮಾಡಿದ್ದಾನೆ. ಈ ದೃಶ್ಯಗಳು ಶಾಲಾ ಕೊಠಡಿಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಘಟನೆ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.