ಹಿಮಾಚಲದ ಲಾಹೌಲ್ ಸ್ಪಿತಿಯಲ್ಲಿ ಭಾರಿ ಭೂಕುಸಿತ; ನದಿಯ ಹರಿವು ನಿಲ್ಲಿಸಿದ ಮಣ್ಣಿನ ರಾಶಿ - ಹಿಮಾಚಲ ಪ್ರದೇಶ ಇತ್ತೀಚಿನ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12758203-thumbnail-3x2-mng.jpg)
ಹಿಮಾಚಲ ಪ್ರದೇಶ: ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ನಂತರ ಇದೀಗ ಲಾಹೌಲ್ ಸ್ಪಿತಿಯಲ್ಲೂ ಭಾರೀ ಪ್ರಮಾಣದ ಗುಡ್ಡ ಕುಸಿದಿದೆ. ಬೆಟ್ಟದಿಂದ ಅಪಾರ ಪ್ರಮಾಣದ ಕಲ್ಲು-ಮಣ್ಣಿನ ರಾಶಿ ನದಿಗೆ ಜಾರಿ ಬಿದ್ದಿದೆ. ಪರಿಣಾಮ ಚೆನಾಬ್ ನದಿಯ ಹರಿವಿಗೆ ಸಂಪೂರ್ಣ ಅಡಚಣೆಯಾಗಿದೆ. ಈ ಬೆಟ್ಟ ಬಿರುಕು ಬೀಡುವ ಶಬ್ದ ಬೆಳಗ್ಗೆ 9ಗಂಟೆಯಿಂದ ಕೇಳುತ್ತಿದೆ ಎಂದು ಇಲ್ಲಿನ ಜನರು ಹೇಳಿದ್ದಾರೆ. ಜಹಲ್ಮಾದಿಂದ ಕಿಲ್ಲಾದ್ ಕಣಿವೆಯವರೆಗಿನ ರಸ್ತೆಯಲ್ಲಿ ವಾಸಿಸುವ ಜನರು ಅಪಾಯ ಎದುರಿಸುತ್ತಿದ್ದಾರೆ. ನದಿಗೆ ಮಣ್ಣಿನ ರಾಶಿ ಬಿದ್ದ ಪರಿಣಾಮ ಜುಂಡಾದಿಂದ ಜೋಬ್ರಾಂಗ್ವರೆಗಿನ ನದಿ ತೀರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಿವೆ. ಕಿನ್ನೌರ್ನಲ್ಲಿಯೇ ಸುಮಾರು ಎರಡು ದಿನಗಳ ಅವಧಿಯಲ್ಲಿ ಎರಡು ದೊಡ್ಡ ಭೂಕುಸಿತಗಳು ಸಂಭವಿಸಿವೆ.
Last Updated : Aug 13, 2021, 1:38 PM IST