ಕಿಸಾನ್ ಮಹಾ ಪಂಚಾಯತ್ ವೇದಿಕೆಯಲ್ಲಿ ಕಾಣಿಸಿಕೊಂಡ ಕೆಂಪುಕೋಟೆ ಹಿಂಸಾಚಾರದ ಆರೋಪಿ ಲಖಾ ಸಿಧಾನ - ಪೊಲೀಸರಿಗೆ ಸವಾಲ್ ಹಾಕಿದ ಲಖಾ ಸಿಧಾನ
🎬 Watch Now: Feature Video
ಬಟಿಂಡಾ ( ಪಂಜಾಬ್): ಜನವರಿ 26 ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಲಖಾ ಸಿಧಾನಾ, ಜಿಲ್ಲೆಯ ಮೆಹರಾಜ್ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ. ದೆಹಲಿ ಹಿಂಸಾಚಾರದ ಬಳಿಕ ಲಖಾ ಸಿಧಾನಾ ತಲೆ ಮರೆಸಿಕೊಂಡಿದ್ದರಿಂದ, ಆತನ ಬಗ್ಗೆ ಮಾಹಿತಿ ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಈ ನಡುವೆ ಇಂದು ಸಿಧಾನ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾನೆ. ಧೈರ್ಯವಿದ್ದರೆ ಸಿಧಾನನನ್ನು ಬಂಧಿಸುವಂತೆ ಕಾರ್ಯಕ್ರಮದ ವೇದಿಕೆಯಲ್ಲಿ ರೈತ ಮುಖಂಡರು ಪೊಲೀಸರಿಗೆ ಸವಾಲು ಹಾಕಿದರು. ಲಖಾ ಸಿಧಾನ ಕೆಂಪು ಕೋಟೆ ಬಳಿ ಹಿಂಸಾಚಾರದ ವೇಳೆ ಫೇಸ್ಬುಕ್ ಲೈವ್ ಮಾಡಿ ಗಮನ ಸೆಳೆದಿದ್ದ.