ಪ್ರಕೃತಿ ಮಡಿಲಲ್ಲಿ ಸುಂದರವಾದ ಶಿವನ ದೇವಾಲಯ: ಈ ದೇಗುಲಕ್ಕಿದೆ ಪೌರಾಣಿಕ ಹಿನ್ನೆಲೆ! - ಹಿಮಾಚಲ ಪ್ರದೇಶದ ತ್ರಿಲೋಕ್‌ಪುರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5951816-thumbnail-3x2-na.jpg)
ತ್ರಿಲೋಕ್‌ಪುರ: ಹಿಮಾಚಲ ಪ್ರದೇಶದ ತ್ರಿಲೋಕ್‌ಪುರದ ಸುಂದರವಾದ ಬೆಟ್ಟಗಳ ನಡುವೆ ನೆಲೆಸಿರುವ ಪುರಾತನ ಶಿವನ ಗುಹಾ ದೇವಾಲಯವಿದೆ. ಧರ್ಮಶಾಲದಿಂದ 50 ಕಿ.ಮೀ ದೂರದಲ್ಲಿರುವ ಈ ದೇವಾಸ್ಥಾನದಲ್ಲಿ ಶಿವನ ಆಶೀರ್ವಾದ ಪಡೆಯಲು ಜನರು ಇಲ್ಲಿಗೆ ಬರುತ್ತಾರೆ. ಗುಹೆಯ ಚಾವಣಿಯು ಸ್ಟ್ಯಾಲ್ಯಾಕ್ಟೈಟ್‌ಗಳನ್ನು ಹೊಂದಿದೆ. ಶಿವ ಇಲ್ಲೇ ತಪಸ್ಸು ಮಾಡಿದ್ದ ಎಂದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಇನ್ನು ಜಾನಪದದ ಪ್ರಕಾರ, ಈ ಗುಹೆಯಲ್ಲಿ ತಪಸ್ಸಿಗೆ ಕುಳಿತ್ತಿದ್ದಾಗ, 100 ಮುಖದ ಸರ್ಪದಿಂದ ಕಾವಲು ಹೊಂದಿದ್ದನೆಂದು ಹೇಳಲಾಗುತ್ತದೆ. ಆ ಪ್ರದೇಶದಲ್ಲಿ ಕುರಿ ಮೇಯಿಸುತ್ತಾ ಬಂದ ಯುವಕನೊಬ್ಬ ಶಿವನ ತಪಸ್ಸು ಭಂಗ ಮಾಡಿದ ಪರಿಣಾಮ, ಆತನನ್ನು ಶಿವ ಕಲ್ಲಾಗಿದ್ದಾನೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಹಾಗಾಗಿ ಈ ಗುಹೆಯಲ್ಲಿ ಶಿವನೂ ಕೋಪದಿಂದ ಕುಳಿತಿದ್ದಾನೆ ಎಂದು ಹೇಳಲಾಗ್ತಿದೆ.