ಪಿಪಿಇ ಕಿಟ್ ಧರಿಸಿ ಬಂದ ಖದೀಮ: 25 ಕೆಜಿ ಚಿನ್ನಾಭರಣ ಕದ್ದವನು ಅಂದರ್ - ವಿಡಿಯೋ - ನವದೆಹಲಿ
🎬 Watch Now: Feature Video
ನವದೆಹಲಿ: ರಾಜಧಾನಿಯ ಆಗ್ನೇಯ ಜಿಲ್ಲೆಯ ಕಲ್ಕಾಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ದೊಡ್ಡ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಮಾಡಿದ್ದಾರೆ. ಕಲ್ಕಾಜಿ ಪ್ರದೇಶದಲ್ಲಿರುವ ಅಂಜಲಿ ಜ್ಯುವೆಲ್ಲರ್ಸ್ ಶೋ ರೂಂನಲ್ಲಿ ಕಳವು ಮಾಡಿದ್ದ 25 ಕೆ ಜಿ ಆಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಕಳ್ಳ ಪಿಪಿಇ ಪಿಟ್ ಧರಿಸಿಕೊಂಡು ಶೋರೂಂಗೆ ಬಂದು ಈ ಕೃತ್ಯ ಎಸಗಿದ್ದಾನೆ. ಈತನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.