ಅರಬ್ನಲ್ಲಿರುವ ಭಾರತೀಯ ವಲಸಿಗರು ಚಿಂತಿಸಬೇಕಿಲ್ಲ: ಯುಎಇ ರಾಜಕುಮಾರಿಯೊಂದಿಗೆ ವಿಶೇಷ ಸಂದರ್ಶನ - Princess Hend Al Qassemi
🎬 Watch Now: Feature Video
ನವದೆಹಲಿ: ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್ ಅರಬ್ ಎಮಿರೇಟ್ಸ್ - ಯುಎಇ) ರಾಜಕುಮಾರಿ ಹೆಂದ್ ಫೈಸಲ್ ಅಲ್ ಕಾಸಿಮಿ ಮಾತನಾಡಿದ್ದಾರೆ. ತಬ್ಲಿಘಿ ಜಮಾತ್ ಕೂಟದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾವನೆ ಅಧಿಕವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಯುಎಇನಲ್ಲಿರುವ ಭಾರತೀಯ ವಲಸಿಗರು ಚಿಂತಿಸಬೇಕಿಲ್ಲ, ಅವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಭಾರತದ ಜಾತ್ಯತೀತತೆ ಬಹುಮುಖ್ಯ ಎಂದು ಹೇಳಿದ್ದಾರೆ. ಭಗವದ್ಗೀತೆ, ಮಹಾತ್ಮಾ ಗಾಂಧಿ ಹಾಗೂ ಯೋಗ ಕುರಿತು ಉಲ್ಲೇಖಿಸಿ ಭಾರತದಂತಹ ದೇಶದಿಂದ ಅವರು ಎಷ್ಟು ಪ್ರೇರಿತರಾಗಿದ್ದಾರೆ ಎನ್ನುವುದನ್ನೂ ಕಾಸಿಮಿ ಈಟಿವಿ ಭಾರತನೊಂದಿಗೆ ಹಂಚಿಕೊಂಡಿದ್ದಾರೆ.