ಬಾಂಗ್ಲಾಗೆ ಉಳ್ಳಾಗಡ್ಡಿ ನಿಷೇಧ: ತಮ್ಮ ಮನೆ ಅಡುಗೆಯಲ್ಲೂ ಈರುಳ್ಳಿ ಬಳಸ್ತಿಲ್ವಂತೆ ಪಿಎಂ ಹಸೀನಾ - ಈರುಳ್ಳಿ ಸೇವನೆ
🎬 Watch Now: Feature Video
ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿರುವ ಕಾರಣ ನೆರೆಯ ದೇಶ ಬಾಂಗ್ಲಾ,ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಉಳ್ಳಾಗಡ್ಡಿ ರಫ್ತಿನ ಮೇಲೆ ನಿಷೇಧ ಹೇರಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮಾತನಾಡಿದ್ದಾರೆ. ನಮ್ಮ-ಭಾರತದ ನಡುವೆ ಈರುಳ್ಳಿ ವಿಚಾರದಲ್ಲಿ ಸ್ವಲ್ಪ ತೊಂದರೆ ಆಗಿದೆ. ಅವರು ನಮಗೆ ಉಳ್ಳಾಗಡ್ಡಿ ರವಾನೆ ಮಾಡುವುದನ್ನ ಯಾಕೆ ನಿಲ್ಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ನನ್ನ ಅಡುಗೆಯಲ್ಲಿ ಉಳ್ಳಾಗಡಿ ಬಳಕೆ ಮಾಡದಂತೆ ಆದೇಶ ಹೊರಡಿಸಿರುವೆ ಎಂದು ನಗುಮುಖದೊಂದಿಗೆ ತಿಳಿಸಿದ್ರು.