ಕಾಶ್ಮೀರದಲ್ಲಿ ಸಾಕು ಪ್ರಾಣಿಗಳ ಚಿಕಿತ್ಸೆಗೆ ಪಶುವೈದ್ಯ ಶಿಬಿರ ಆಯೋಜಿಸಿದ ಭಾರತೀಯ ಸೇನೆ - ಪ್ರಾಣಿ ಚಿಕಿತ್ಸಾ ಸೇವೆ
🎬 Watch Now: Feature Video
ಕೇಂದ್ರಾಡಳಿತ ಪ್ರದೇಶದಿಂದ ದೂರದಲ್ಲಿ ವಾಸಿಸುವ ಗ್ರಾಮಸ್ಥರ ನೆರವಿಗೆ ಭಾರತೀಯ ಸೇನೆ ನೂತನ ಯೋಜನೆ ರೂಪಿಸಿದೆ. ಭಾರತೀಯ ಸೇನೆಯು ಆಗಸ್ಟ್ 03ರಂದು ಕುಪ್ವಾರಾ ಜಿಲ್ಲೆಯ ಬಂಗಸ್ ಕಣಿವೆಯಲ್ಲಿ ಪಶುವೈದ್ಯ ಶಿಬಿರವನ್ನು ಆಯೋಜಿಸಿತ್ತು. ಸೇನೆಯ ಪಶು ವೈದ್ಯರು ಹಾಗೂ ಸ್ಥಳೀಯ ಪಶುವೈದ್ಯರ ಸಹಾಯದಿಂದ ನೂರಾರು ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಯಿತು. "ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ಪಶುವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸೇನೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಬಂಗಸ್ ಕಣಿವೆಯಲ್ಲಿ ಹಬ್ಬದ ಸಂದರ್ಭದಲ್ಲಿ ನಾವು ಈ ಶಿಬಿರವನ್ನು ಆಯೋಜಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.