ರಕ್ಷಣೆ, ಬಾಹ್ಯಾಕಾಶದಲ್ಲಿ ಉದ್ಯಮದಲ್ಲಿ ಅಗ್ರ 5 ರಾಷ್ಟ್ರಗಳಲ್ಲಿ ಭಾರತ ಗುರುತಿಸುವಂತೆ ಮಾಡುವುದೇ ಗುರಿ: ರಾಜನಾಥ್! - ರಾಜನಾಥ್ ಸಿಂಗ್ ಸುದ್ದಿ
🎬 Watch Now: Feature Video

ನವದೆಹಲಿ: ರಕ್ಷಣಾ ವಲಯ ಹಾಗೂ ಏರೋಸ್ಪೇಸ್ ಉದ್ಯಮದಲ್ಲಿ ಭಾರತವನ್ನ ಅಗ್ರ 5 ರಾಷ್ಟ್ರಗಳಲ್ಲಿ ಗುರುತಿಸುವಂತೆ ಮಾಡುವುದೇ ನಮ್ಮ ಗುರಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಉತ್ಪಾದನೆವರೆಗೆ ಸ್ವಾವಲಂಬನೆ ಸಾಧಿಸುವುದು ಹಾಗೂ ಇತರ ಸ್ನೇಹಿತ ದೇಶಗಳ ಬೇಡಿಕೆ ಈಡೇರಿಸಲು ನಾವು ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಏರೋ ಇಂಡಿಯಾ 2021ರ ರೌಂಡ್ ಟೇಬಲ್ನಲ್ಲಿ ಮಾತನಾಡಿದ ಅವರು, ಏರೋ ಇಂಡಿಯಾದಲ್ಲಿ ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಭಾರತ ಪ್ರಮುಖ ಸ್ಥಾನ ಪಡೆದಿದೆ ಎಂದಿ ಅವರು ತಿಳಿಸಿದ್ದಾರೆ. 13ನೇ ಆವೃತ್ತಿ ಏರೋ ಇಂಡಿಯಾ ಫೆಬ್ರವರಿ 3ರಿಂದ 7ರವರೆಗೆ ನಡೆಯಲಿದೆ.