ಪರಿಸರ ಸ್ನೇಹಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಪರಿಚಯಿಸಿದ ಹೈದರಾಬಾದ್ನ ಸಂಸ್ಥೆ - ಸೆಲೆಸ್ಟಿಯಲ್ ಇ-ಮೊಬಿಲಿಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6376987-thumbnail-3x2-hrs.jpg)
ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ವೊಂದು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಪವರ್ಡ್ ಟ್ರ್ಯಾಕ್ಟರ್ ಸಂಶೋಧನೆ ಮಾಡಿದೆ. ಟ್ರ್ಯಾಕ್ಟರ್ ಬ್ಯಾಟರಿ ಬದಲಾವಣೆ ಮತ್ತು ಮರುಜೋಡಣೆ ಜತೆಗೆ ಪುನರ್ ಉತ್ಪಾದನಾ ಸಾಮರ್ಥ್ಯವನ್ನ ಹೊಂದಿರುವ ಫೀಚರ್ ಆಪ್ಶನ್ ಹೊಂದಿದೆ. ಇದು ಝೀರೋ ಪರಿಸರ ಮಾರಕವಾಗಿದ್ದು, ಪರಿಸರ ಸ್ನೇಹಿ ಎಂಜಿನಿಯರಿಂಗ್ ತಂತ್ರಜ್ಞಾನವನ್ನ ಹೊಂದಿದೆ. ಪರಿಸರ ಸ್ನೇಹಿ ಟ್ರ್ಯಾಕ್ಟರ್ ಉತ್ಪಾದಕ ಸಂಸ್ಥೆಯ ಸಹ ಸಂಸ್ಥಾಪಕ ಮಾತನಾಡಿ, ಟ್ರ್ಯಾಕ್ಟರ್ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 19 ವರ್ಷಗಳಿಂದ ಪಾರ್ಟರ್ ಸಯೀದ್ ಒಡಗೂಡಿ ಬ್ಯಾಟರಿ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಿದ್ದೇವೆ. ಇನ್ನೊಬ್ಬ ಸಹವರ್ತಿ ಮಿಥುನ್ ಮ್ಯಾನುಫ್ಯಾಕ್ಚರಿಂಗ್ ಹಿನ್ನೆಲೆ ಉಳ್ಳವರಾಗಿದ್ದರೆ, ಮತ್ತೊಬ್ಬರು ಟ್ರ್ಯಾಕ್ಟರ್ ರಚನೆಯಲ್ಲಿ ನಿಪುಣರಾಗಿದ್ದಾರೆ. ಹೀಗೆ ಎಲ್ಲರೂ ಜೊತೆಯಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ಅಭಿವೃದ್ಧಿ ಪಡಿಸಿದ್ದೇವೆ ಎಂದು ಸಿದ್ಧಾರ್ಥ್ ದುರೈರಾಜನ್ ಮಾಹಿತಿ ನೀಡಿದ್ದಾರೆ.