ತಂದೆ ಅನುಪಸ್ಥಿತಿ ಕಾಡಲಿದೆ, ಪ.ಬಂಗಾಳಕ್ಕೆ ಕರೆದೊಯ್ಯುವ ಯೋಜನೆ ಈಡೇರಲಿಲ್ಲ: ಅಭಿಜಿತ್ ಮುಖರ್ಜಿ - ಮಾಜಿ ರಾಷ್ಟ್ರಪತಿ ನಿಧನ
🎬 Watch Now: Feature Video

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಸೇನಾ ಗೌರವದೊಂದಿಗೆ ನಡೆಸಲಾಯಿತು. ಮಗ ಅಭಿಜಿತ್ ಮುಖರ್ಜಿ ಅಂತಿಮ ವಿಧಿವಿಧಾನ ನಡೆಸಿದರು. ಇದಾದ ಬಳಿಕ ಮಾತನಾಡಿದ ಅವರು, ನಮ್ಮ ತಂದೆಯ ಅನುಪಸ್ಥಿತಿ ಖಂಡಿತವಾಗಿ ನಮ್ಮನ್ನು ಕಾಡಲಿದೆ. ಕೇವಲ ಕೋವಿಡ್ನಿಂದ ಅವರು ಸಾವನ್ನಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಬದಲಿಗೆ ಮೆದುಳಿನ ಸಮಸ್ಯೆ ಕೂಡ ಅವರಿಗೆ ಅತಿಯಾಗಿ ಕಾಡಿತ್ತು. ಅವರ ಪಾರ್ಥಿವ ಶರೀರವನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯುವ ಯೋಜನೆ ನನ್ನಲ್ಲಿತ್ತು. ಆದರೆ ಪ್ರಸ್ತುತ ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.