ಸೌಹಾರ್ದತೆಯ ನಡೆ: ಮುಸ್ಲಿಂ ಯುವತಿಯ ವಿವಾಹ ನೆರವೇರಿಸಿದ ಹಿಂದೂ ಕುಟುಂಬ! - ಮುಸ್ಲಿಂ ಹುಡುಗಿಯ ಮದುವೆ ಏರ್ಪಡಿಸಿದ ಹಿಂದೂ ಕುಟುಂಬ
🎬 Watch Now: Feature Video

ದೇಶಾದ್ಯಂತ ಎನ್ಆರ್ಸಿ, ಸಿಎಎ, ಆರ್ಥಿಕ ಹಿನ್ನಡೆಯಂತ ಸಮಸ್ಯೆಗಳು ತಲೆದೋರಿ ವಿವಾದಗಳು ಸೃಷ್ಟಿಯಾಗಿವೆ. ಈ ಮಧ್ಯೆ ಇಲ್ಲೊಂದು ಹಿಂದೂ ಕುಟುಂಬವೊಂದು ಮುಸ್ಲಿಂ ಯುವತಿಯ ವಿವಾಹ ನೆರವೇರಿಸುವ ಮೂಲಕ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಎಂಬ ದೇಶವನ್ನು ಸಾಬೀತು ಮಾಡಿದೆ. ಮಧ್ಯಪ್ರದೇಶದ ರತ್ಲಾಮ್ನಲ್ಲಿ ಸಾಜೀದಾ ಎಂಬ ಮುಸ್ಲಿಂ ವಧುವಿನ ಮದುವೆಯನ್ನು ಅವರ ಪಕ್ಕದ ಮನೆಯ ಹಿಂದೂ ಕುಟುಂಬವೊಂದು ಮುಂದೆ ನಿಂತು ನಡೆಸಿಕೊಟ್ಟಿದೆ. ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ವಧುವಿನ ತಾಯಿ, ಸುಮಾರು 20 ವರ್ಷಗಳಿಂದ ಅಕ್ಕ-ಪಕ್ಕದಲ್ಲೇ ನಾವು ವಾಸವಾಗಿದ್ದು, ನನ್ನ ಮಗಳು ಸಾಜೀದಾಳನ್ನೂ ಅವರು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವ ಹಿಂದೂ ಕುಟುಂಬಸ್ಥರು ಸಾಜೀದಾ ನಮ್ಮ ಮಗಳಂತೆ, ಬಾಲ್ಯದಿಂದಲೂ ಆಕೆಯನ್ನು ನೋಡಿದ್ದೇವೆ. ಹೀಗಾಗಿ ಇವಳ ಮದುವೆಗೆ ಏನಾದರೂ ಕೊಡುಗೆ ನೀಡಬೇಕೆಂದು ಅನಿಸಿ, ನಾವೇ ಮುಂದೆ ನಿಂತು ಮದುವೆ ಮಾಡಿಕೊಡುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.
Last Updated : Feb 11, 2020, 10:11 AM IST