ವಿಡಿಯೋ: ಮಂಜು ಹೊದ್ದು ಮಲಗಿದೆ ಶಿಮ್ಲಾ - ಶಿಮ್ಲಾದಲ್ಲಿ ಮಂಜು

🎬 Watch Now: Feature Video

thumbnail

By

Published : Jan 9, 2022, 9:13 AM IST

ಶಿಮ್ಲಾ(ಹಿಮಾಚಲ ಪ್ರದೇಶ): ಗಿರಿಧಾಮದಲ್ಲಿರುವ ಸುಂದರ ಪಟ್ಟಣ ಶಿಮ್ಲಾ. ಈ ಶಿಮ್ಲಾ ಇದೀಗ ಮತ್ತಷ್ಟು ರಮಣೀಯವಾಗಿ ಗೋಚರಿಸುತ್ತಿದೆ. ಇದಕ್ಕೆ ಕಾರಣ ದಟ್ಟ ಮಂಜು. ಈ ಪಟ್ಟಣವನ್ನು ಮಂಜು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇಲ್ಲಿನ ಮನೆಗಳ ಮೇಲ್ಛಾವಣಿಗಳಿಗೆ ಮಂಜಿನದ್ದೇ ಹೊದಿಕೆ, ಗಿಡ-ಮರಗಳೂ ಶುಭ್ರ ಬಿಳಿ ವಸ್ತ್ರ ತೊಟ್ಟ ರೀತಿಯಲ್ಲಿ ಕಾಣುತ್ತಿವೆ. ಅಷ್ಟೇ ಏಕೆ, ಮಂಜಿನಿಂದ ಆವೃತವಾದ ವಾಹನಗಳಂತೂ ಗುರುತೇ ಸಿಗದಂತಿವೆ. ಒಟ್ಟಿನಲ್ಲಿ ಮಂಜಿನಲ್ಲಿ ಮುಳುಗಿದ ಶಿಮ್ಲಾ ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.