ಭಾರಿ ಹಿಮಪಾತಕ್ಕೆ ಸಾಕ್ಷಿಯಾದ ಉತ್ತರಾಖಂಡ್ - ಉತ್ತರಾಖಂಡದ ಪಿತೋರಾಗರ್ನಲ್ಲಿ ಹಿಮವರ್ಷ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5374281-thumbnail-3x2-megha.jpg)
ಪಿತೋರಾಗರ್: ಉತ್ತರಾಖಂಡವು ಅದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ರಾಜ್ಯ. ರಾಜ್ಯದ ಉತ್ತರಭಾಗದ ಬಹುತೇಕ ಪ್ರದೇಶವು ಹಿಮಾಲಯ ಪರ್ವತ ಶ್ರೇಣಿಯಡಿ ಬರುತ್ತವೆ. ಉತ್ತರಾಖಂಡ್ನ ಪಿತೋರಾಗರ್ ಜಿಲ್ಲೆಯಲ್ಲಿ ಮತ್ತೊಮ್ಮೆ ಹವಾಮಾನ ಬದಲಾಗಿದ್ದು, ಇಲ್ಲಿನ ಮುನ್ಸಿಯರಿಯ ಎತ್ತರದ ಶಿಖರಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಪಿತೋರಾಗರ್ನ ಎಲ್ಲಾ ಪ್ರದೇಶಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಇಲ್ಲಿನ ಮನೆಗಳು, ರಸ್ತೆಗಳು, ಮರಗಳು, ವಾಹನಗಳು ಹಿಮದಿಂದ ಆವೃತವಾಗಿರುತ್ತದೆ. ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಹಿಮವರ್ಷವನ್ನ ಕಣ್ತುಂಬಿಕೊಂಡು ಪ್ರವಾಸಿಗರು ಆನಂದಿಸುತ್ತಿದ್ದಾರೆ.