ದೆಹಲಿಯಲ್ಲಿ ಮಳೆಯ ಅಬ್ಬರ: ಟ್ರಾಫಿಕ್ ಜಾಮ್ ಕಂಟಕ, ಸವಾರರಿಗೆ ಕಷ್ಟ ಕಷ್ಟ - ಮಳೆ
🎬 Watch Now: Feature Video
ಗುರುಗ್ರಾಮ್ (ದೆಹಲಿ): ದೆಹಲಿ-ಎನ್ಸಿಆರ್ನಲ್ಲಿ ಸತತ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇನ್ನು ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿ ಮುಂಜಾನೆಯಿಂದಲೇ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಆರ್ಭಟಕ್ಕೆ ಅನೇಕ ಪ್ರದೇಶಗಳಲ್ಲಿ ನೀರು ನಿಂತಿದೆ. ಅಲ್ಲಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 7.3 ಮಿ.ಮೀ ಮಳೆಯಾಗಿದೆ. ಗುರುಗ್ರಾಮ್ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 95 ಮಿ.ಮೀ. ದಾಖಲಾಗಿದೆ. ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.