ಟಿಕ್ಟಾಕ್ನಿಂದ್ಲೇ ಫೇಮಸ್ ಆದ ನಟಿಗೆ ಟಿಕೆಟ್; ಸೋನಾಲಿಗೆ ಮಣೆ ಹಾಕಿದ ಹರಿಯಾಣ ಬಿಜೆಪಿ! - ಹರಿಯಾಣ ವಿಧಾನಸಭೆ ಎಲೆಕ್ಷನ್
🎬 Watch Now: Feature Video
ಚಂಡೀಗಢ: 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಇಂದು ಬಿಜೆಪಿ ಚುನಾವಣೆಗೆ ಕಣಕ್ಕಿಳಿಸುವ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಮಾಡಿದೆ. ವಿಶೇಷವಾಗಿ ಈ ಪಟ್ಟಿಯಲ್ಲಿ ಟಿಕ್ ಟಾಕ್ ಮಹಿಳಾ ಸ್ಟಾರ್ಗೆ ಮಣೆ ಹಾಕಿದ್ದು, ಸೋನಾಲಿ ಪೋಗಟ್ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಮುಖಂಡ ಕುಲ್ದೀಪ್ ಬಿಸ್ನೋ ವಿರುದ್ಧ ಸೋನಾಲಿ ಸ್ಪರ್ಧಿಸಲಿದ್ದಾರೆ.