ವಿಡಿಯೋ: ಗಿನ್ನಿಸ್ ರೆಕಾರ್ಡ್ ಬರೆದ ಹೈದರಾಬಾದ್‌ನ ಡೈಮಂಡ್ ರಿಂಗ್ - diamond ring
🎬 Watch Now: Feature Video
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ 'ದಿ ಡೈಮಂಡ್ ಸ್ಟೋರ್'ನ ಮಾಲೀಕರಾದ ಕೊಟ್ಟಿ ಶ್ರೀಕಾಂತ್ ಅವರು ವಿಶ್ವದಲ್ಲೇ ಅತಿ ಹೆಚ್ಚು ವಜ್ರಗಳನ್ನು ಹೊಂದಿರುವ ಉಂಗುರವನ್ನು ತಯಾರಿಸಿದ್ದಾರೆ. ಈ ಮೂಲಕ ಗಿನ್ನಿಸ್ ರೆಕಾರ್ಡ್ ಬರೆದಿದ್ದಾರೆ. ಈ ಹಿಂದೆ ಮುಂಬೈ ಮೂಲದ ವ್ಯಾಪಾರಿ 7,777 ವಜ್ರಗಳನ್ನು ಬಳಸಿ ಉಂಗುರ ತಯಾರಿಸಿ ವಿಶ್ವ ದಾಖಲೆ ಮಾಡಿದ್ದರು. ಇದೀಗ 7801 ವಜ್ರಗಳ ಉಂಗುರ ತಯಾರಿಸಿ ಹಿಂದಿನ ರೆಕಾರ್ಡ್ ಅನ್ನು ಕೊಟ್ಟಿ ಶ್ರೀಕಾಂತ್ ಬ್ರೇಕ್ ಮಾಡಿದ್ದಾರೆ. ಈ ಉಂಗುರಕ್ಕೆ 'ದಿ ಡಿವೈನ್ -7801 ಬ್ರಹ್ಮ ಕಮಲ' ಎಂದು ಹೆಸರಿಡಲಾಗಿದೆ.