ಹೊತ್ತಿನ ಊಟಕ್ಕಾಗಿ 85ರ ಇಳಿವಯಸ್ಸಿನಲ್ಲೂ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುವ ಅಜ್ಜಿ! - ಲಾಠಿಕಾಠಿ ಪ್ರದರ್ಶನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8158138-thumbnail-3x2-wdfdfd.jpg)
ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟ ಹೇಳತೀರದು. ದೇಶದ ಸಾವಿರಾರು ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ 85 ವರ್ಷದ ಅಜ್ಜಿ ಹೊಟ್ಟೆ ತುಂಬಿಸಿಕೊಳ್ಳಲು ವಿವಿಧ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶನ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಶಾಂತಾಬಾಯಿ ಪವಾರ್, 8ನೇ ವಯಸ್ಸಿನಿಂದಲೂ ಲಾಠಿಕಾಠಿ ಪ್ರದರ್ಶನ ಮಾಡ್ತಿದ್ದು, ನಮ್ಮ ತಂದೆಯಿಂದ ಈ ವಿದ್ಯೆ ಕಲಿತ್ತಿದ್ದೇನೆ ಎಂದು ತಿಳಿಸಿದ್ದಾರೆ.