ನಾಗರ ಹಾವಿನೊಂದಿಗೆ ಯುವತಿಯರ ಗಾರ್ಬಾ ಡ್ಯಾನ್ಸ್! ವಿಡಿಯೋ ವೈರಲ್... - ಜೂನಾಗಢ್ ಗಾರ್ಬಾ ನೃತ್ಯ ಸುದ್ದಿ
🎬 Watch Now: Feature Video
ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಾಕ್ರಮದಲ್ಲಿ ಬಾಲಕಿ ಸೇರಿ ಮೂವರು ನಾಗರಹಾವಿನೊಂದಿಗೆ ಗಾರ್ಬಾ ನೃತ್ಯ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್ನ ಜೂನಾಗಢ್ ವ್ಯಾಪ್ತಿಯ ಶಿಲ್ ಗ್ರಾಮದಲ್ಲಿ ಗುರುವಾರ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರ ಜೊತೆ ಬಾಲಕಿಯೊಬ್ಬಳು ನಾಗರಹಾವನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ಗಾರ್ಬಾ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಾಣಿ ಸಂರಕ್ಷಣ ಕಾಯ್ದೆಯಡಿಯಲ್ಲಿ ಕಾರ್ಯಕ್ರಮ ಆಯೋಜಕ ಸೇರಿದಂತೆ ಮಹಿಳೆಯರು ಸೇರಿದಂತೆ ಬಾಲಕಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.