ಸ್ವಾತಂತ್ರ್ಯ ದಿನಾಚರಣೆ: ಜಮ್ಮು ಕಾಶ್ಮೀರದಲ್ಲಿ ಭರ್ಜರಿ ಪೂರ್ವಾಭ್ಯಾಸ - ಜಿಲ್ಲಾಧಿಕಾರಿ ದೋಡಿ ಕಿಶೋರಿ ಲಾಲ್ ತ್ರಿವರ್ಣ ಧ್ವಜವನ್ನ ಹಾರಿಸಿದರು
🎬 Watch Now: Feature Video
ದೋಡಾ ( ಜಮ್ಮು ಕಾಶ್ಮೀರ): ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಜಮ್ಮು ಕಾಶ್ಮೀರದ ದೋಡಾದಲ್ಲಿ ಸಮವಸ್ತ್ರಗಳೊಂದಿಗೆ ಪೂರ್ವಾಭ್ಯಾಸ ನಡೆಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ದೋಡಿ ಕಿಶೋರಿ ಲಾಲ್ ತ್ರಿವರ್ಣ ಧ್ವಜವನ್ನ ಹಾರಿಸಿದರು. ಕೆಡೆಟ್‌ಗಳಿಂದ ಪಥಸಂಚಲನ ಕೂಡ ನಡೆಯಿತು. ಪೂರ್ವಾಭ್ಯಾಸದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲ ಕೂಡಾ ಭಾಗವಹಿಸಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನದ ಮುನ್ನಾ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರಸ್ತುತ ಪಡಿಸಿದರು.