ನದಿಯ ಪ್ರವಾಹದಲ್ಲಿ ಸಿಲುಕಿದ್ದ ಐವರು ಕಾರ್ಮಿಕರ ರಕ್ಷಣೆ: ಸಾವಿನ ಬಾಗಿಲು ತಟ್ಟಿ ಬಂದ ಜೀವಗಳು - SHARDA RIVER FLOOD
🎬 Watch Now: Feature Video
ಉತ್ತರ ಪ್ರದೇಶದ ಗುಜ್ಜರ್ ಶಾರದಾ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಐವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ನದಿಯ ನೀರು ಉಕ್ಕಿ ಬಂದಿದ್ದರಿಂದ ಅಲ್ಲಿದ್ದ ಕಾರ್ಮಿಕರು ನೀರಿನ ಸೆಳೆತಕ್ಕೆ ಸಿಲಕಿದ್ದರು. ಮೊದಲು ಜೆಸಿಬಿ ಮೂಲಕ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತಾದರೂ ಅದು ಫಲಿಸಲಿಲ್ಲ. ಪ್ರವಾಹಕ್ಕೆ ಜೆಸಿಬಿ ಕೂಡ ಮುಳುಗಲು ಆರಂಭಿಸಿತು. ಅನ್ಯ ಮಾರ್ಗವಿಲ್ಲದೇ ಸ್ಥಳೀಯರು ದೋಣಿ ಮೂಲಕ ನದಿಗೆ ಇಳಿದು ಅವರನ್ನು ರಕ್ಷಣೆ ಮಾಡಿದ್ದಾರೆ. ಭಾರಿ ಪ್ರಮಾಣದ ನೀರಿನ ಸೆಳೆತಕ್ಕೆ ಸಲುಕಿ ಪ್ರಾಣ ರಕ್ಷಣೆಗಾಗಿ ಹೋರಾಟ ನಡೆಸಿದ್ದ ಕಾರ್ಮಿಕರನ್ನು ಸಾಕಷ್ಟು ಹರಸಾಹಸದ ಬಳಿಕ ರಕ್ಷಣೆ ಮಾಡಲಾಯಿತು.