ಇಂಧನ ಬೆಲೆ ಕಡಿಮೆ ಯಾವಾಗ? ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸೀತಾರಾಮನ್ ಉತ್ತರ ಹೀಗಿದೆ!
ಅಹಮದಾಬಾದ್(ಗುಜರಾತ್): ವಿದ್ಯಾರ್ಥಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ ನಡೆಸಿದ್ದು, ಈ ವೇಳೆ ವಿದ್ಯಾರ್ಥಿಯೋರ್ವ ದೇಶದಲ್ಲಿ ಇಂಧನ ಬೆಲೆ ಯಾವಾಗ ಕಡಿಮೆಯಾಗಲಿದೆ ಎಂದು ಕೇಳಿರುವ ಪ್ರಶ್ನೆಗೆ ಕೇಂದ್ರ ಸಚಿವೆ ಉತ್ತರಿಸಿದ್ದಾರೆ. ತೈಲ ಬೆಲೆ ಯಾವಾಗ ಕಡಿಮೆಯಾಗಲಿದೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಇದೊಂದು ಧರ್ಮ ಸಂಕಟ(ಸಂದಿಗ್ಧತೆ) ಎಂದು ಅವರು ಹೇಳಿದ್ದಾರೆ.