ಬೆಂಗಳೂರು: ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಆರೋಪ - Shop Owner Assaulted - SHOP OWNER ASSAULTED
🎬 Watch Now: Feature Video
Published : Sep 19, 2024, 11:23 AM IST
|Updated : Sep 19, 2024, 12:31 PM IST
ಬೆಂಗಳೂರು: ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕನ ಮೇಲೆ ಪಕ್ಕದ ಅಂಗಡಿ ಮಾಲೀಕ ಹಾಗೂ ಆತನ ಕಡೆಯವರು ಹಲ್ಲೆ ನಡೆಸಿರುವ ಆರೋಪ ಚಿಕ್ಕಪೇಟೆ ಫ್ಲಾಜ್ದಲ್ಲಿನ ಬಟ್ಟೆ ಅಂಗಡಿಯಲ್ಲಿ ಕೇಳಿ ಬಂದಿದೆ. ಘಟನೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತನ್ನ ಅಂಗಡಿಯಿಂದ ಪಕ್ಕದ ಅಂಗಡಿಗೆ ಗ್ರಾಹಕರು ಹೋದರೆಂದು ಕೋಪಗೊಂಡ ಮಾಲೀಕ, ಗ್ರಾಹಕರಿದ್ದ ಅಂಗಡಿಗೆ ತೆರಳಿ ಆ ಅಂಗಡಿ ಮಾಲೀಕ ಹಾಗೂ ಆತನ ತಂದೆಗೆ ಥಳಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಚಿಕ್ಕಪೇಟೆ ಫ್ಲಾಜ್ನಲ್ಲಿ ಮಾರುತಿ ಅಟ್ಪೈರ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿರುವ ಕಿರಣ್ ತಮ್ಮ ತಂದೆ ರಮೇಶ್ ಜೊತೆ ಗ್ರಾಹಕರಿಗೆ ಸೀರೆ ತೋರಿಸುತ್ತಿದ್ದರು. ಈ ವೇಳೆ ಏಕಾಏಕಿ ಪಕ್ಕದ ಬಟ್ಟೆ ಅಂಗಡಿ ಮಾಲೀಕ ಹಾಗೂ ಆತನ ಕಡೆಯವರು ಬಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಜಾರೋಷವಾಗಿ ಫ್ಲೈಓವರ್ ದಾಟಿದ ಚಿರತೆ - leopard crossing road