ETV Bharat / state

ನೀವು ನೂರು ಎಫ್ಐಆರ್ ಹಾಕಿ, ನಾವು ಹೆದರಲ್ಲ, ಓಡಿಹೋಗಲ್ಲ: ಶೋಭಾ ಕರಂದ್ಲಾಜೆ - Shobha Karandlaje

ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್​ ಸರ್ಕಾರದ ದ್ವೇಷ ರಾಜಕಾರಣದ ವಿರುದ್ಧ ಹರಿಯಾಯ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಿಮ್ಮನ್ನು ಪ್ರಶ್ನೆ ಮಾಡಿದರೆ, ನಮ್ಮ ಮೇಲೆಯೇ ಕೇಸ್​​ ಹಾಕ್ತೀರಿ, ಅವನ್ನೆಲ್ಲ ನಾವು ಕಾನೂನು ರೀತಿಯಲ್ಲೇ ಎದುರಿಸುತ್ತೇವೆ ಎಂದು ಸವಾಲೆಸೆದರು.

Union Minister Shobha Karandlaje Pressmeet
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗೋಷ್ಟಿ (ETV Bharat)
author img

By ETV Bharat Karnataka Team

Published : Sep 19, 2024, 3:59 PM IST

ಬೆಂಗಳೂರು: "ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕಾರಣ ಆರಂಭಿಸಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸದೆ ಕೇವಲ ಬಿಜೆಪಿ ನಾಯಕರು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ. ನೀವು ಕೇಸ್ ಹಾಕಿ ಸಿದ್ದರಾಮಯ್ಯ ಅವರೇ, ನಾವು ಓಡಿಹೋಗಲ್ಲ. ನಾವು ಹೋರಾಟದಿಂದಲೇ ಬಂದವರು. ಇವನ್ನೆಲ್ಲ ಕಾನೂನು ಮೂಲಕವೇ ಎದುರಿಸುತ್ತೇವೆ. ಅಧಿಕಾರ ಶಾಶ್ವತ ಅಲ್ಲ, ನೀವು ಅಧಿಕಾರದಿಂದ ಕೆಳಗೆ ಇಳಿತೀರಿ. ಜನ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಅಘೋಶಿತ ಎಮರ್ಜೆನ್ಸಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಹಿಟ್ಲರ್ ಆಗಿದ್ದಾರೆ. ಬಿಜೆಪಿ ನಾಯಕರ ಮೇಲೆ ನಿರಂತರ ಎಫ್ಐಆರ್ ಹಾಕುತ್ತಿದ್ದಾರೆ. ಬಿಜೆಪಿ ರಾಜ್ಯ, ಕೇಂದ್ರದ ನಾಯಕರ ಮೇಲೆ ಎಫ್ಐಆರ್ ಹಾಕಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಭರತ್ ಶೆಟ್ಟಿ ಸೇರಿದಂತೆ ಅನೇಕರ ಮೇಲೆ ಎಫ್ಐಆರ್ ಹಾಕಿದ್ದಾರೆ. ಬಿಜೆಪಿ ನಾಯಕರ ಧ್ವನಿ ಹತ್ತಿಕ್ಕೋ ಕೆಲಸ ಮಾಡಿದ್ದಾರೆ."

"ಐವಾನ್ ಡಿಸೋಜಾ ರಾಜ್ಯಪಾಲರನ್ನು ಬಾಂಗ್ಲಾದೇಶ ಮಾದರಿಯಲ್ಲಿ ಓಡಿಸ್ತೇವೆ ಅಂದರೂ ಅವರ ಮೇಲೆ ಎಫ್ಐಆರ್ ಆಗಿಲ್ಲ. ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಎಂಎಲ್‌ಎ ಮತ್ತು ಅವರ ಮಗ ಹಣ ಕೇಳಿದ್ದರು. ಕೊಡಲು ನನಗೆ ಶಕ್ತಿ ಇಲ್ಲ ಅಂತ‌ ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಅವರ ಮೇಲೆ ಎಫ್ಐಆರ್ ಆಗಲಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಆಯ್ತು. ಎಸ್ಐಟಿ ರಚನೆ ಮಾಡಿದರು, ಅದರಲ್ಲಿ ನಾಗೇಂದ್ರ ಹೆಸರೇ ಇಲ್ಲ. ಸಿಬಿಐ ವರದಿ ಓದಿದ್ದೀರಾ ಸಿದ್ದರಾಮಯ್ಯ ಅವರೇ?" ಎಂದು ಪ್ರಶ್ನಿಸಿದರು.

"ನಾಗಮಂಗಲ ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿ ಬಂಧನ ಮಾಡಿ, ವಿಸರ್ಜನೆ ಮಾಡಿದ್ದೀರಿ. ಇದು ದೇಶದಲ್ಲಿ ನಡೆದ ಮೊದಲ ಘಟನೆ. ಗಣೇಶ ಮೂರ್ತಿ ಮೇಲೆ ಚಪ್ಪಲಿ ಎಸೆದಿದ್ದಾರೆ. ನಾಗಮಂಗಲ ಜನರಿಗೆ ಹೇಗೆ ಇಷ್ಟು ಧೈರ್ಯ ಬಂತು. ಈಗ ಕೇರಳದಿಂದ ಬಂದವರು ಅಂತ ಹೇಳುತ್ತಿದ್ದಾರೆ. ಪರಮೇಶ್ವರ್ ಇದನ್ನು ಸಣ್ಣ ಘಟನೆ ಅಂದರು. ತನಿಖೆ ನಡೆಯುತ್ತಿಲ್ಲ, ಅಲ್ಲಿಗೆ ಮುಚ್ಚಿ ಹೋಗಿದೆ. ಕೋಲಾರದಲ್ಲಿ ಮೊದಲ ಬಾರಿ ಪ್ಯಾಲೆಸ್ತೇನ್ ಧ್ವಜ ಕಾಣುತ್ತಿದೆ" ಎಂದರು.

"ನಿನ್ನೆ ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ರಾಷ್ಟ್ರಧ್ವಜ ವಿರೂಪಗೊಳಿಸಿ, ಅಶೋಕ ಚಕ್ರದಲ್ಲಿ ಉರ್ದುವಿನಲ್ಲಿ ಬರೆದಿದ್ದಾರೆ. ಇದು ಕರ್ನಾಟಕದ ಸ್ಥಿತಿ. ಇಷ್ಟು ಧೈರ್ಯ ಸಮಾಜ ದ್ರೋಹಿಗಳಿಗೆ ಹೇಗೆ ಬಂತು? ನೀವು ಅಧಿಕಾರಕ್ಕೆ ಬಂದಿರಿ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಘಟನೆ ನಡೆಯಿತು. ನೀವು ಅವರನ್ನು ಸಮರ್ಥಿಸಿಕೊಂಡಿರಿ. ಶಿವಮೊಗ್ಗದಲ್ಲಿ ಔರಂಗಜೇಬನ ರಕ್ತಸಿಕ್ತ ಇತಿಹಾಸ ತೋರಿಸ್ತೀರಿ. ಚಿಕ್ಕಪೇಟೆಯಲ್ಲಿ ಹನುಮಾನ್​ ಚಾಲೀಸ್​ ಆಲಿಸಿದರೆ ಹಲ್ಲೆ‌ ಮಾಡ್ತಾರೆ. ನಿಮ್ಮನ್ನು ಪ್ರಶ್ನೆ ಮಾಡಿದ್ರೆ ಅಶೋಕ್ ಹಾಗೂ ನನ್ನ ಮೇಲೆ ಎಫ್ಐಆರ್ ಹಾಕ್ತೀರಿ" ಎಂದು ಶೋಭಾ ವಾಗ್ದಾಳಿ ನಡೆಸಿದರು.

"ಪ್ರಜಾಪ್ರಭುತ್ವ ದಿನ ಜನ ಬರಲ್ಲ ಅಂತ ಶಾಲಾ ಮಕ್ಕಳನ್ನ ಸರಪಳಿ ಕಾರ್ಯಕ್ರಮಕ್ಕೆ ಬಳಸಿಕೊಂಡಿರಿ. ಪೋಷಕರು ನಮಗೆ ಕರೆ ಮಾಡಿ ಬಿಸಿಲಲ್ಲಿ ನಿಲ್ಲಿಸಿದ್ದಾರೆ ಎಂದು ಹೇಳಿದರು. ಮೈಸೂರಿನಲ್ಲಿ ಈದ್ ಮಿಲಾದ್ ಹಬ್ಬದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ. ನಾಗಮಂಗಲದಲ್ಲಿ 25 ಅಂಗಡಿಗಳು ಸುಟ್ಟುಹೋಗಿವೆ, ನೀವು ಹೋಗಿ ನೋಡಿದ್ರಾ? ಡಿಸಿಎಂ ಅಮೆರಿಕದಲ್ಲಿ ಇದ್ರು ಬೇಡ, ನೀವು ಹೋಗಬಹುದಿತ್ತಲ್ವಾ? ಗೃಹಸಚಿವರು ಹೋಗಲ್ಲ, ಮುಖ್ಯಮಂತ್ರಿಗಳೂ ಹೋಗಲ್ಲ" ಎಂದು ವಾಗ್ದಾಳಿ ನಡೆಸಿದರು.

"ನಿಮಗೆ ಹಿಂದೂಗಳು ಕಾಲಿನ ಕಸ ಆಗಿದ್ದಾರೆ. ನಿಮಗೆ ಹಿಂದೂಗಳು, ಹಿಂದೂ ದೇವರು ಬೇಕಾಗಿಲ್ಲ. ಆದರೆ ನಾವು ಇದನ್ನು ಬಿಡೋದಿಲ್ಲ. ನಿಮಗೆ ಕ್ಷೇತ್ರದ ಜನರೆಂದರೆ ಅಸಡ್ಡೆ ಆಗಿದೆ. ಪ್ಯಾಲೆಸ್ತೇನ್ ಧ್ವಜ ಹಾರಿಸಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಭಾರತದ ಧ್ವಜ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ನೀವು ಪಿಎಫ್ಐಗೆ ಬೆಂಬಲ ನೀಡಿದ್ರಿ. ಅವರ ಮೇಲಿನ ಕೇಸ್​ಗಳನ್ನು ತೆಗೆದು, ಹೊರಗೆ ಬಿಟ್ರಿ. ಅವರೆಲ್ಲಾ ಬಂದು ಈ ರೀತಿ ಕೃತ್ಯ ಎಸಗುತ್ತಿದ್ದಾರೆ" ಎಂದು ಆರೋಪಿಸಿದರು.

"ನಿಮ್ಮ ಯಾವುದೇ ಶಾಸಕರ‌ ಮೇಲೆ ಕೇಸ್ ದಾಖಲಿಸಲ್ಲ. ಇದು ಸಿದ್ದರಾಮಯ್ಯ ಸರ್ಕಾರದ ಆಡಳಿತ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದೇವೆ‌. ಬಿಜೆಪಿ ಅಧಿಕಾರದ ಅವಧಿಯಲ್ಲೂ ಹೋರಾಟ ಮಾಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಕೂಡ ಹೋರಾಟ ಮಾಡಿದ್ದೇವೆ. ಬಿಜೆಪಿ ಕಾರ್ಯಕರ್ತ ಸ್ವಾರ್ಥ ಇಲ್ಲದೆ ಹೋರಾಟ ಮಾಡ್ತಿದ್ದಾರೆ. ಆದರೆ ಮುಡಾ, ವಾಲ್ಮೀಕಿ ನಿಗಮದ ಹಗರಣ ಬಳಿಕ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿ ಮುಖಂಡರ ಮೇಲೆ ಎಫ್ಐಆರ್ ಹಾಕಿದ್ದಾರೆ. ಕೇಸ್ ವಿಚಾರದಲ್ಲಿ ಪೊಲೀಸರು ಬಂಧನ ಮಾಡಿದ್ರೆ, ಬಂಧನಕ್ಕೆ ಒಳಗಾಗ್ತೀವಿ. ನಾವು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ ಎಂದರು.

ಇದನ್ನೂ ಓದಿ: ನಾವು ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ: ಜಿ.ಪರಮೇಶ್ವರ್ - Home Minister Parameshwara

ETV Bharat Logo

Copyright © 2024 Ushodaya Enterprises Pvt. Ltd., All Rights Reserved.