ETV Bharat / bharat

ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್​ ರೈಲು - Goods Train Derailed - GOODS TRAIN DERAILED

ಉತ್ತರ ಪ್ರದೇಶದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಜಾರ್ಖಂಡ್​​ನಿಂದ ರಾಜಸ್ಥಾನದಕ್ಕೆ ತೆರಳುತ್ತಿದ್ದ ಗೂಡ್ಸ್​ ರೈಲು ಹಳಿ ತಪ್ಪಿದೆ. ಈ ಘಟನೆಯಲ್ಲಿ ಯಾವುದೇ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಪ್ಲಿಂಗ್ ಮುರಿದಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅಧಿಕಾರಿಗಳು ತಿಳಿಸಿದ್ದಾರೆ.

Goods Train Carrying Coal Derailed Near Vrindavan Road Station
ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್​ ರೈಲಿನ 25 ವ್ಯಾಗನ್​ಗಳು (ETV Bharat)
author img

By ETV Bharat Karnataka Team

Published : Sep 19, 2024, 3:47 PM IST

ಮಥುರಾ, ಉತ್ತರಪ್ರದೇಶ: ಜಾರ್ಖಂಡ್‌ನಿಂದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಕನಿಷ್ಠ 25 ವ್ಯಾಗನ್‌ಗಳು ಉತ್ತರ ಪ್ರದೇಶದ ವೃಂದಾವನ ರಸ್ತೆ ನಿಲ್ದಾಣದ ಬಳಿ ಹಳಿ ತಪ್ಪಿವೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ವ್ಯಾಗನ್​ಗಳನ್ನು ಸರಿಪಡಿಸಿ, ಹಳಿ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ಪ್ರಾಥಮಿಕ ತನಿಖೆ ಪ್ರಕಾರ, ಕಪ್ಲಿಂಗ್ ಮುರಿದಿದ್ದರಿಂದ ಗೂಡ್ಸ್ ಹಳಿ ತಪ್ಪಿದೆ ಎಂದು ಶಂಕಿಸಲಾಗಿದೆ. ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಘಟನೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ವಿಷಯ ತಿಳಿದ ತಕ್ಷಣ ಸ್ಥಳೀಯರು ಭೀತಿಗೊಳಗಾಗಿದ್ದರು. ಆದರೆ ಯಾವುದೇ ಜೀವ ಹಾನಿಯಾಗಿಲ್ಲ ಎಂಬ ಮಾಹಿತಿ ಪಡೆದು ನಿಟ್ಟುಸಿರು ಬಿಟ್ಟರು.

ಹಳಿತಪ್ಪಿ ಮೂರು ರೈಲು ಮಾರ್ಗಗಳನ್ನು ತಡೆದಿದ್ದು, ಮಥುರಾ - ಪಲ್ವಾಲ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆಗ್ರಾದಿಂದ ದೆಹಲಿಗೆ ಮತ್ತು ದೆಹಲಿಯಿಂದ ಆಗ್ರಾಕ್ಕೆ ಪ್ರಯಾಣಿಸುವ ಬಹು ರೈಲುಗಳನ್ನು ಹತ್ತಿರದ ನಿಲ್ದಾಣಗಳಲ್ಲಿ ನಿಲ್ಲಿಸಬೇಕಾಯಿತು.

ರೈಲುಗಳ ಮಾರ್ಗ ಬದಲಾವಣೆಯಿಂದಾಗಿ ಹಲವಾರು ಪ್ರಯಾಣಿಕರು ಅಸಮಾಧಾನಗೊಂಡಿದ್ದು, ಕೆಲವರು ರೈಲ್ವೆ ಸಚಿವರಿಗೆ ದೂರು ಸಲ್ಲಿಸಿದ್ದಾರೆ. ''ಹಳಿತಪ್ಪಿದ ವ್ಯಾಗನ್‌ಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಜೆಸಿಬಿ, ಕ್ರೇನ್ ಹಾಗೂ ಎಲ್ಲ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು ಡೌನ್‌ಲೈನ್‌ನಲ್ಲಿ ಚಳವಳಿಯನ್ನು ಪ್ರಾರಂಭಿಸಬೇಕು ಎಂದು ಮಥುರಾ ನಿಲ್ದಾಣದ ನಿರ್ದೇಶಕ ಎಸ್‌ಕೆ ಶ್ರೀವಾಸ್ತವ ಹೇಳಿದ್ದಾರೆ.

ಹಳಿಗಳ ಮೇಲೆ ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಬಳಕೆದಾರರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಾಗ್ಯುದ್ಧ ಮುಂದುವರೆದಿದೆ. 2023 ಮತ್ತು 2024 ರ ನಡುವೆ 50 ಅಪಘಾತಗಳು ಸಂಭವಿಸಿವೆ, ಸುಮಾರು 320 ಜನರು ಸಾವನ್ನಪ್ಪಿದ್ದಾರೆ ಎಂದು ಎಕ್ಸ್​​ ಬರಹ ಹಾಕಿರುವ ನೆಟಿಜನ್ ಒಬ್ಬ ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದ್ದಾನೆ.

ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಆಗಿತ್ತು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ - Tirupati Laddu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.