ತೀವ್ರಗೊಂಡ ರೈತರ ಹೋರಾಟ.. ದೇಶಾದ್ಯಂತ ‘ಚಕ್ಕಾ ಜಾಮ್’ - ದೇಶಾದ್ಯಂತ ‘ಚಕ್ಕಾ ಜಾಮ್’
🎬 Watch Now: Feature Video
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರು ಠಿಕಾಣಿ ಹೂಡಿದ್ದು, ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅದರಂತೆ ಇಂದು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ಅನ್ನದಾತರು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ರೈತರ ಸಂಚಾರ ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಗಾಜಿಪುರ, ಟಕ್ರಿ, ಸಿಂಘು ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹರಿಯಾಣ, ಪಂಜಾಬ್, ದೆಹಲಿ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಚಕ್ಕಾಜಾಮ್ ಪ್ರತಿಭಟನೆ ಆಚರಿಸಲಾಗುತ್ತಿದೆ.