ಮೆರವಣಿಗೆಗೆ ತಂದಾಗ ಸಿಟ್ಟಿಗೆದ್ದ ಆನೆ.. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ ಗಜರಾಜ! - ಕೇರಳದಲ್ಲಿ ಆನೆಯ ರಂಪಾಟ

🎬 Watch Now: Feature Video

thumbnail

By

Published : Jan 18, 2022, 4:32 PM IST

Updated : Jan 18, 2022, 4:37 PM IST

ಪಾಲಕ್ಕಡ್‌(ಕೇರಳ): ಮಸೀದಿವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮೆರವಣಿಗೆಗೋಸ್ಕರ ಕರೆತರಲಾಗಿದ್ದ ಆನೆಯೊಂದು ಏಕಾಏಕಿ ರಂಪಾಟ ನಡೆಸಿದ ಪರಿಣಾಮ ಅನೇಕ ವಾಹನಗಳು ಜಖಂಗೊಂಡಿವೆ. ಅಲ್ಲದೇ ಮಾವುತ ಸೇರಿ ಮೂವರು ಗಾಯಗೊಂಡಿದ್ದಾರೆ. ಮೆರವಣಿಗೆ ಮುಗಿಸಿ ವಾಪಸ್​ ಹೋಗುತ್ತಿದ್ದ ವೇಳೆ ಏಕಾಏಕಿ ಆನೆ ಈ ರೀತಿ ವರ್ತಿಸಿದೆ. ಪಾಲಕ್ಕಡ್​​ನಲ್ಲಿರುವ ತೆರುವತ್ ಮಸೀದಿಯಲ್ಲಿ ನಡೆಯುವ ಉತ್ಸವದಲ್ಲಿ ಅಪಾರ ಜನ ಸೇರಿದ್ದರು. ಈ ವೇಳೆ ಸಿಟ್ಟಿಗೆದ್ದ ಆನೆ ಈ ರೀತಿ ರಂಪಾಟ ನಡೆಸಿದೆ. ಆನೆಯನ್ನ ನಿಯಂತ್ರಿಸಲು 2 ಗಂಟೆ ಕಾಲ ಹಿಡಿಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Jan 18, 2022, 4:37 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.