ಮದ್ಯಕ್ಕಾಗಿ ಮುಗಿಬಿದ್ದ ಕಲಿಯುಗದ ಕುಡುಕರು... ಕ್ಯೂನಲ್ಲಿ ನಿಂತು ‘ಸರಕು’ ಪಡೆದ ಮದ್ಯದಾಸರು! ವಿಡಿಯೋ... - ಗುಂಟೂರು ಸುದ್ದಿ
🎬 Watch Now: Feature Video

ಖಾಸಗಿ ಮದ್ಯದ ಅಂಗಡಿ ಲೈಸನ್ಸ್ ಗಡುವು ಮುಗಿದಿದ್ದು, ಆಂಧ್ರಪ್ರದೇಶ ರಾಜ್ಯಾದ್ಯಂತ ಕುಡುಕರು ಕಂಗಾಲಾಗಿದ್ದಾರೆ. ಕೆಲವು ಅಂಗಡಿಯಲ್ಲಿ ಮದ್ಯದ ಸರಕು ಖಾಲಿಯಾಗಿದ್ದರಿಂದ ಕುಡುಕರು ಗೊಂದಲಗೊಂಡರು. ಗುಂಟೂರು ಜಿಲ್ಲೆಯ ಮಂಗಳಗಿರಿ ಎಕ್ಸೈಜ್ ಶಾಖೆ ಸೋಮವಾರದಿಂದಲೇ ಮದ್ಯ ವಿತರಿಸುತ್ತಿದೆ. ನಿನ್ನೆ ರಾತ್ರಿಯಿಂದಲೇ ಅಬಕಾರಿ ಶಾಖೆಯ ಮುಂದೆ ಕ್ಯೂನಲ್ಲಿ ನಿಂತು ಕುಡುಕರು ಮದ್ಯ ಪಡೆದರು. ಕೆಲಸಕ್ಕೆ ಅರ್ಜಿ ಸಲ್ಲಿಸಲು, ಮನೆಗೆ ರೇಷನ್ ತರಲು ಸರತಿ ಸಾಲಿನಲ್ಲಿ ನಿಲ್ಲಲೂ ಬೇಸರಗೊಳ್ಳುವ ಮದ್ಯಪ್ರಿಯರು ಈಗ ಮದ್ಯಕ್ಕಾಗಿ ಗಂಟೆ - ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತರು. ಒಬ್ಬರಿಗೆ ಮೂರು ಬಾಟಲಿಗಳಂತೆ ಅಬಕಾರಿ ಅಧಿಕಾರಿ ನೇತೃತ್ವದಲ್ಲೇ ಮದ್ಯ ವಿತರಿಸಲಾಯಿತು. ಇನ್ನು ಬೇರೆ ಕಡೆ ಬಾರ್ ಮಾಲೀಕರು ಕೊಂಚ ಬೆಲೆ ಏರಿಸಿ ಮದ್ಯ ವಿತರಿಸಿದರು. ಕುಡುಕರು ಸರತಿ ಸಾಲಿನಲ್ಲಿ ನಿಂತು ಮದ್ಯ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.