ಏಯ್ ಕತ್ತೆ, ಹಸುವಿನ ಕಾಲನ್ನು ಕಚ್ಚಿ ಹಿಡಿಯೋದಾ.. ವಿಡಿಯೋ ವೈರಲ್ - ಶಾಧೋಲ್ನಲ್ಲಿ ಹಸವಿನ ಕಾಲು ಕಚ್ಚಿದ ಕತ್ತೆ
🎬 Watch Now: Feature Video
ಮಧ್ಯಪ್ರದೇಶದ ಶಾಧೋಲ್ನ ತರಕಾರಿ ಮಾರುಕಟ್ಟೆಯೊಂದರಲ್ಲಿ ಕತ್ತೆಯೊಂದು ಹಸುವಿನ ಕಾಲನ್ನ ಕಚ್ಚಿ ಹಿಡಿದಿರೋ ಘಟನೆ ನಡೆದಿದೆ.
ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ. ತರಕಾರಿ ಮಾರುಕಟ್ಟೆಯ ದಾರಿಯಲ್ಲಿ ಒಂದು ಕಡೆಯಿಂದ ಕತ್ತೆ ಮತ್ತು ಇನ್ನೊಂದು ಕಡೆಯಿಂದ ಹಸು ಹೀಗೆ ಹೋಗುತ್ತಿತ್ತು. ಈ ವೇಳೆ ಕತ್ತೆಗೆ ಏನಾಯ್ತೋ.. ನೇರ ಹಸುವಿನ ಕಾಲನ್ನು ಕಚ್ಚಿ ಹಿಡಿದಿದೆ. ಹಸು ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಕೊನೆಗೆ ಸ್ಥಳೀಯರು ಸೇರಿ ಕತ್ತೆ ಬಾಯಿಯಿಂದ ಹಸುವಿನ ಕಾಲು ಬಿಡಿಸಿದ್ದಾರೆ.