ಇದೆಂಥ ವಿಕೃತಿ.. ಬೈಕ್ಗೆ ನಾಯಿ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ದುಷ್ಟರು! - ನಾಯಿಯನ್ನು ಬೈಕ್ಗೆ ಕಟ್ಟಿಕೊಂಡು ರಸ್ತೆಯುದ್ದಕ್ಕೂ ಎಳೆದೊಯ್ದಿರುವ ಅಮಾನವೀಯ ಘಟನೆ
🎬 Watch Now: Feature Video
ಮಲ್ಲಪುರಂ (ಕೇರಳ): ತಾವೇ ಸಾಕಿದ್ದ ನಾಯಿಯನ್ನು ಬೈಕ್ಗೆ ಕಟ್ಟಿಕೊಂಡು ರಸ್ತೆಯುದ್ದಕ್ಕೂ ಎಳೆದೊಯ್ದಿರುವ ಅಮಾನವೀಯ ಘಟನೆ ಕೇರಳದ ಮಲ್ಲಪುರಂನ ಎಡಕ್ಕರದಲ್ಲಿ ನಡೆದಿದೆ. ಇದನ್ನು ನೋಡಿದ ಕೆಲ ಜನರು ಹರಸಾಹಸ ಮಾಡಿ ಇವರನ್ನು ತಡೆದಿದ್ದು, ಶ್ವಾನ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಅದರ ಎರಡೂ ಕಾಲುಗಳಿಗೆ ಗಾಯವಾಗಿದೆ. ಈ ಸಂಬಂಧ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.