ಮಾನಸಿಕವಾಗಿ ಕುಗ್ಗಿರುವ ಕೊರೊನಾ ಸೋಂಕಿತರನ್ನು ನಗಿಸಲು ವೈದ್ಯನ ಡ್ಯಾನ್ಸ್ - ಕೊರೊನಾ ರೋಗಿಗಳನ್ನು ನಗಿಸಲು ವೈದ್ಯನ ಡ್ಯಾನ್ಸ್
🎬 Watch Now: Feature Video
ಕೇರಳ: ಮಾನಸಿಕವಾಗಿ ಕುಗ್ಗಿರುವ ಕೋವಿಡ್ ಸೋಂಕಿತರನ್ನು ಖುಷಿಪಡಿಸಲು ವೈದ್ಯರೊಬ್ಬರು ಪಿಪಿಇ ಕಿಟ್ ಧರಿಸಿ ನೃತ್ಯ ಮಾಡಿದ್ದಾರೆ. ಕೇರಳದ ಪಡನಕ್ಕಾಡ್ ಕೃಷಿ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ನಗಿಸಲು ಕನ್ಹಂಗಡ್ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಶ್ರೀಜಿತ್ ಕೃಷ್ಣನ್ ನೃತ್ಯ ಮಾಡಿದ್ದಾರೆ. ಈ ದೃಶ್ಯವನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.