ಡಿಎಂಕೆ ಭ್ರಷ್ಟ ಪಕ್ಷ.. ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ : ಜೆ ಪಿ ನಡ್ಡಾ - ಎಐಎಡಿಎಂಕೆ
🎬 Watch Now: Feature Video
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ನಿನ್ನೆ ಚೆನ್ನೈನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ರೋಡ್ ಶೋ ನಡೆಸಿದ್ದರು. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಡಿಎಂಕೆ ನೇತೃತ್ವದ ಯುಪಿಎ ಗೆಲ್ಲಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಯ ವರದಿ ತಳ್ಳಿ ಹಾಕಿದರು. ಡಿಎಂಕೆ ಭ್ರಷ್ಟ ಪಕ್ಷ ಎಂಬುದು ಸಾಬೀತಾಗಿದೆ. ಇಲ್ಲಿ ನೆರೆದಿರುವ ಜನರ ಉತ್ಸಾಹವೇ ಗೆಲುವು ನಮ್ಮದೆಂದು ಹೇಳುತ್ತಿದೆ. ಬಿಜೆಪಿಯನ್ನು ಕಂಡು ಡಿಎಂಕೆ ಹೆದರುತ್ತಿದೆ. ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ. ತಮಿಳುನಾಡಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.