ಅಧ್ಯಾತ್ಮಿಕ ಕ್ಷೇತ್ರ ಕಾಶಿಯ ಗಂಗೆಯಲ್ಲಿ ಮಿಂದೆದ್ದ ಭಕ್ತರು..ಕಳೆಗಟ್ಟಿದ ಸಂಕ್ರಾಂತಿ - ಸಂಕ್ರಾಂತಿ ಸಂಭ್ರಮ
🎬 Watch Now: Feature Video
ವಾರಣಾಸಿ (ಉತ್ತರ ಪ್ರದೇಶ) ಅಧ್ಯಾತ್ಮಿಕ ಕ್ಷೇತ್ರ ಕಾಶಿಯಲ್ಲಿ ಮಕರ ಸಂಕ್ರಾಂತಿಯ ಸಂಭ್ರಮ ಕಳೆಗಟ್ಟಿದೆ. ಈ ವಿಶೇಷ ಸಂದರ್ಭದಲ್ಲಿ ಬೆಳಗ್ಗೆಯಿಂದಲೇ ಹಲವು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಪವಿತ್ರಾ ಗಂಗಾ ನದಿಯಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಬಳಿಕ ಎಳ್ಳು-ಬೆಲ್ಲ, ಅಕ್ಕಿ ದಾನ ಮಾಡಿ ಹಬ್ಬವನ್ನು ಆಚರಿಸಿದ್ದಾರೆ. ಪ್ರತಿ ವರ್ಷ ಸಂಕ್ರಾಂತಿಯಂದು ಗಂಗಾ ನದಿಯ ಪವಿತ್ರ ಸ್ನಾನಕ್ಕಾಗಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ.