2025 Honda Activa 110 Launched: ನಮ್ಮ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಹೋಂಡಾ ಆಕ್ಟಿವಾ ಸಹ ಒಂದು. ಜನಪ್ರಿಯ ದ್ವಿಚಕ್ರ ವಾಹನ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಈಗ OBD2B ನಿಬಂಧನೆಗಳ ಅನುಗುಣವಾಗಿ ಅಪ್ಡೇಟ್ ಮಾಡಿ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಇದರ ಜೊತೆ ಈ ವರ್ಷ ತನ್ನ ಸಂಪೂರ್ಣ ಲೈನ್ಅಪ್ ಅಪ್ಡೇಟ್ ಮಾಡಿದೆ.
ಅಪ್ಡೇಟ್ ಮಾಡಿದ ಹೊಸ ಆಕ್ಟಿವಾದಲ್ಲಿ ಬದಲಾಗಿದ್ದೇನು?: ಕಂಪನಿಯು ಹೋಂಡಾ ಆಕ್ಟಿವಾ 110 ಸ್ಕೂಟರ್‌ನ ಫೀಚರ್ಗಳ ಲಿಸ್ಟ್ ಅನ್ನು ಅಪ್ಗ್ರೇಡ್ ಮಾಡಿದೆ. ಇದರಲ್ಲಿ 4.2-ಇಂಚಿನ TFT ಕಲರ್ ಡಿಸ್ಪ್ಲೇ ಹೊಂದಿದೆ. ಇದು ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಇಕೋ-ಇಂಡಿಕೇಟರ್, ಡಿಸ್ಟೆನ್ಸ್ ಟು ಎಮ್ಟಿ ಸೇರಿದಂತೆ ವಿವಿಧ ರೀತಿಯ ಮಾಹಿತಿಗಳನ್ನು ಒದಗಿಸುತ್ತದೆ. ಇದಲ್ಲದೆ ಈ ಹೊಸ ಹೋಂಡಾ ಆಕ್ಟಿವಾ ನಿಮ್ಮ ಡಿವೈಸ್ಗಳನ್ನು ಸಹ ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಒದಗಿಸಿದೆ.
ಹೋಂಡಾ ಆಕ್ಟಿವಾ 110 ಪವರ್‌ಟ್ರೇನ್: ಈ ಹೊಸ ಹೋಂಡಾ ಆಕ್ಟಿವಾ ಅದೇ ಹಳೆಯ 109.51cc, ಸಿಂಗಲ್-ಸಿಲಿಂಡರ್ PGM-Fi ಎಂಜಿನ್‌ನೊಂದಿಗೆ ಬರುತ್ತದೆ. ಆದರೆ ಈಗ ಅದನ್ನು OBD2B-ನಿಬಂಧನೆಗಳಿಗೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ. ಈ ಎಂಜಿನ್ 7.7bhp ಪವರ್ ಮತ್ತು 9.03Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಮೋಟಾರ್‌ಸೈಕಲ್ ಈ ಆಕ್ಟಿವಾವನ್ನು ಐಡ್ಲಿಂಗ್ ಸ್ಟಾಪ್ ಸಿಸ್ಟಮ್‌ನೊಂದಿಗೆ ಸಜ್ಜುಗೊಳಿಸಿದೆ.
ಮೊದಲ ತಲೆಮಾರಿನ ಹೋಂಡಾ ಆಕ್ಟಿವಾ 110 ಅನ್ನು 2001 ರಲ್ಲಿ ಬಿಡುಗಡೆ ಮಾಡಲಾಯಿತು. ಕಳೆದ ಎರಡು ದಶಕಗಳಿಂದ ಇದು ಕಂಪನಿಯ ಮಾರಾಟವಾದ ಅತ್ಯುತ್ತಮ ಸ್ಕೂಟರ್ ಆಗಿದೆ. ಕಳೆದ ಕೆಲವು ವರ್ಷಗಳಿಂದ ಇದು ಹೆಚ್ಚು ಬದಲಾಗಿಲ್ಲವಾದರೂ ಕಂಪನಿಯು ಅದನ್ನು ಹೊಸದಾಗಿಡಲು ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ಎಲ್ಇಡಿ ಹೆಡ್ಲೈಟ್ ಮತ್ತು ಡಿಜಿಟಲ್ ಟ್ರಿಪ್ ಮೀಟರ್ ಅನ್ನು ಒಳಗೊಂಡಿರುವುದು ಗಮನಾರ್ಹ.
2025 ಹೋಂಡಾ ಆಕ್ಟಿವಾ ಕಲರ್ ಆಪ್ಷನ್: 2025 ಹೋಂಡಾ ಆಕ್ಟಿವಾ ಮಾರುಕಟ್ಟೆಯಲ್ಲಿ ಮೆಟಾಲಿಕ್ ರೆಡ್, ಪರ್ಲ್ ಬ್ಲ್ಯಾಕ್, ಪರ್ಲ್ ವೈಟ್, ಮೆಟಾಲಿಕ್ ಬ್ಲೂ, ಮ್ಯಾಟ್ ಗ್ರೇ ಮತ್ತು ಪರ್ಲ್ ಬ್ಲೂ ಸೇರಿದಂತೆ ಒಟ್ಟು ಆರು ಕಲರ್ ಆಪ್ಷನ್ಗಳಲ್ಲಿ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಈ ಕಲರ್ಸ್ STD, DLX, ಮತ್ತು H-ಸ್ಮಾರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
ಬೆಲೆ: ಕಂಪನಿಯು ಈ ಅಪ್ಡೇಟ್ಡ್ ಸ್ಕೂಟರ್‌ನ ಬೆಲೆಯನ್ನು ಸಹ ಹೆಚ್ಚಿಸಿದೆ. ಇದರ ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ ರೂ.80,950 ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದು ಪ್ರಸ್ತುತ ಮಾದರಿಗಿಂತ ರೂ. 2,266 ಹೆಚ್ಚಾಗಿದೆ.
ಓದಿ: ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕ್ಯೂ ನ್ಯೂ ಸ್ಮಾರ್ಟ್ಫೋನ್: ಇದರ ಹೆಸರೇನು ಗೊತ್ತಾ?