ನೀವೂ ಹೀಗೇ ಮಾಡಿ... ಆಂಬುಲೆನ್ಸ್ಗೆ ದಾರಿ ಬಿಟ್ಟು ಮಾದರಿಯಾದ ಗಣೇಶ ಭಕ್ತಗಣ! - ಆಂಬುಲೆನ್ಸ್ಗೆ ಗಣೇಶ ಭಕ್ತರು ಸ್ವಯಂ ದಾರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4425585-thumbnail-3x2-ks.jpg)
ಪುಣೆ: ದೇಶದ ಹಲವೆಡೆ ಗುರುವಾರ ಗಣೇಶ ನಿಮಜ್ಜನದ ಸಂಭ್ರಮ ಮನೆ ಮಾಡಿತ್ತು. ಈ ಸಂಭ್ರಮ ಮಹಾರಾಷ್ಟ್ರದಲ್ಲೂ ಮೇಳೈಸಿತ್ತು. ಪುಣೆಯಲ್ಲಿ ಲಕ್ಷಾಂತರ ಭಕ್ತರ ಮೆರವಣಿಗೆ ನಡುವೆ ಗಣೇಶನಿಗೆ ವಿದಾಯ ಹೇಳಲಾಯಿತು. ಗಣೇಶನ ನಿಮಜ್ಜನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಆಗಮಿಸಿದ ಆಂಬುಲೆನ್ಸ್ ಒಂದಕ್ಕೆ ಪುಣೆಯ ಜನರು ಶಿಸ್ತಿನಿಂದ ದಾರಿ ಮಾಡಿಕೊಟ್ಟರು. ಹೀಗೆ ಅನಾರೋಗ್ಯಕ್ಕೊಳಗಾದ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ಗೆ ಗಣೇಶ ಭಕ್ತರು ಸ್ವಯಂ ಆಗಿ ತಾವೇ ದಾರಿ ಮಾಡಿಕೊಟ್ಟು, ಇತರರಿಗೆ ಮಾದರಿಯಾದರು. ಕಿಕ್ಕಿರಿದು ಸೇರಿದ್ದ ಜನಸಂದಣಿ ನಡುವೆ ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಕ್ತರ ಮಾದರಿ ನಡೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.